ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮಗಳ ಜೊತೆ ಕಾಲಕಳೆದಿದ್ದಾರೆ. ಮಗಳ ಜೊತೆ ಆಟವಾಡಿರುವ ರೋಹಿತ್ ಗಲ್ಲಿ ಬಾಯ್ ಚಿತ್ರದ ಹಾಡು ಹೇಳಿದ್ದಾರೆ.
ಮುಂಬೈ(ಮಾ.23): ಐಪಿಎಲ್ ಟೂರ್ನಿ ಇಂದಿನಿಂದ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ CSK ಹಾಗೂ RCB ಮುಖಾಮುಖಿಯಾಗಲಿದೆ. ಇನ್ನು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೋರಾಟ ನಡೆಸಲಿದೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಮಗಳ ಜೊತೆ ಕಾಲ ಕಳೆದಿದ್ದಾರೆ.
ಇದನ್ನೂ ಓದಿ: IPL 2019: RCB vs CSK ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಪಡೆಗೆ ಗೆಲುವಿನ ಕನವರಿಕೆ
ರೋಹಿತ್ ಶರ್ಮಾ ಗಲ್ಲಿ ಬಾಯ್ ಚಿತ್ರದ ಅಸ್ಲಿ ಹಿಪ್ ಹಾಪ್ ಸಾಂಗ್ ಹೇಳಿ ಮಗಳು ಸಮೈರಾ ಜೊತೆ ಆಟವಾಡಿದ್ದಾರೆ. ಸುಂದರ ವೀಡಿಯೋವೊಂದನ್ನು ಅಪ್‌ಲೋಡ್ ಮಾಡಿರುವ ರೋಹಿತ್ ಶರ್ಮಾ, ನಮ್ಮೊಳಗೊಬ್ಬ ಗಲ್ಲಿ ಬಾಯ್ ಇದ್ದಾನೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 51 ದಿನ 60 ಪಂದ್ಯ: ಐಪಿಎಲ್ ಕ್ರಿಕೆಟ್ ಹಂಗಾಮಾಕ್ಕೆ ಕೌಂಟ್’ಡೌನ್ ಸ್ಟಾರ್ಟ್
ಮಾರ್ಚ್ 24 ರಂದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ನಡೆಸಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಮುಂಬೈ 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಿಸಲಿದೆ. ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮುಂಬೈ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ.
