Asianet Suvarna News Asianet Suvarna News

ಪೈನ್‌ ಶತಕ ಬಾರಿಸಿದರೆ ಖರೀದಿಸುತ್ತೇವೆ: ರೋಹಿತ್‌

3ನೇ ದಿನದಾಟಕ್ಕೂ ಮೊದಲು ಮಾತನಾಡಿದ ರೋಹಿತ್‌, ‘ಪೈನ್‌ ಹೇಳಿದ್ದನ್ನು ನಾನು ಕೇಳಿಸಿಕೊಂಡೆ. ಅವರು ಈ ಪಂದ್ಯದಲ್ಲಿ ಶತಕ ಬಾರಿಸಿದರೆ, ಅವರನ್ನು ಖರೀದಿ ಮಾಡಲು ಮುಂಬೈ ಇಂಡಿಯನ್ಸ್‌ ಮಾಲೀಕರಿಗೆ ಶಿಫಾರಸು ಮಾಡುತ್ತೇನೆ’ ಎಂದರು.

Rohit Sharma responds to Tim Paine IPL banter
Author
Melbourne VIC, First Published Dec 29, 2018, 2:16 PM IST

ಮೆಲ್ಬರ್ನ್‌[ಡಿ.29]: ‘ರೋಹಿತ್‌ ಸಿಕ್ಸರ್‌ ಬಾರಿಸಿದರೆ ನಾನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಬೆಂಬಲಿಸುತ್ತೇನೆ’ ಎಂದು ಕಾಲೆಳೆದಿದ್ದ ಆಸ್ಪ್ರೇಲಿಯಾ ನಾಯಕ ಟಿಮ್‌ ಪೈನ್‌ಗೆ, ಭಾರತೀಯ ಬ್ಯಾಟ್ಸ್‌ಮನ್‌ ತಕ್ಕ ಉತ್ತರ ನೀಡಿದ್ದಾರೆ. 

3ನೇ ದಿನದಾಟಕ್ಕೂ ಮೊದಲು ಮಾತನಾಡಿದ ರೋಹಿತ್‌, ‘ಪೈನ್‌ ಹೇಳಿದ್ದನ್ನು ನಾನು ಕೇಳಿಸಿಕೊಂಡೆ. ಅವರು ಈ ಪಂದ್ಯದಲ್ಲಿ ಶತಕ ಬಾರಿಸಿದರೆ, ಅವರನ್ನು ಖರೀದಿ ಮಾಡಲು ಮುಂಬೈ ಇಂಡಿಯನ್ಸ್‌ ಮಾಲೀಕರಿಗೆ ಶಿಫಾರಸು ಮಾಡುತ್ತೇನೆ’ ಎಂದರು. ರೋಹಿತ್‌ ಪ್ರತಿಕ್ರಿಯೆಗೆ ಸಾಮಾಜಿಕ ತಾಣಗಳಲ್ಲಿ ಭಾರತೀಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಸೀಸ್‌ ನಾಯಕನ ವಿರುದ್ಧ ಹರಿಹಾಯ್ದಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್’ನಲ್ಲಿ ಭಾರತ ಮೊದಲ ಇನ್ನಿಂಗ್ಸ್’ನಲ್ಲಿ 7 ವಿಕೆಟ್ ಕಳೆದುಕೊಂಡು 443 ರನ್ ಬಾರಿಸಿತ್ತು, ಇನ್ನು ಎರಡನೇ ಇನ್ನಿಂಗ್ಸ್’ನಲ್ಲಿ 8 ವಿಕೆಟ್’ಗೆ 106 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 151 ರನ್’ಗಳಿಗೆ ಸರ್ವಪತನ ಕಂಡು 292 ರನ್’ಗಳ ಹಿನ್ನಡೆ ಅನುಭವಿಸಿತ್ತು. ಅಂತಿಮವಾಗಿ ಟೀಂ ಇಂಡಿಯಾ ನೀಡಿದ್ದ 399 ರನ್’ಗಳ ಗುರಿ ಬೆನ್ನತ್ತಿರುವ ಆಸಿಸ್ 4ನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 258 ರನ್ ಬಾರಿಸಿದ್ದು ಸೋಲಿನತ್ತ ಮುಖ ಮಾಡಿದೆ.
 

Follow Us:
Download App:
  • android
  • ios