ನವದೆಹಲಿ[ಮಾ.13]: ಸದಾ ಒಂದಿಲ್ಲೊಂದು ದಾಖಲೆ ಬರೆಯತ್ತಾ ಸಾಗುತ್ತಿರುವ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಇನ್ನು ಕೇವಲ 46 ರನ್ ಬಾರಿಸಿದರೇ ಏಕದಿನ ಕ್ರಿಕೆಟ್’ನಲ್ಲಿ 8 ಸಾವಿರ ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್’ನಲ್ಲಿ 8 ಸಾವಿರ ರನ್ ಪೂರೈಸಿದ ವಿಶ್ವದ 31ನೇ ಹಾಗೂ ಭಾರತದ 9ನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ’ಹಿಟ್’ಮ್ಯಾನ್’ ಖ್ಯಾತಿಯ ರೋಹಿತ್ ಪಾತ್ರರಾಗಲಿದ್ದಾರೆ.

ಸಚಿನ್-ಸೆಹ್ವಾಗ್ ದಾಖಲೆ ಮುರಿದ ಧವನ್-ರೋಹಿತ್ ಜೋಡಿ..!

2013ರ ಬಳಿಕ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಭಾರತ ತಂಡದ ಆರಂಭಿಕನಾಗಿ ಭಡ್ತಿ ಪಡೆದ ರೋಹಿತ್, ವಿಶ್ವದ ಸ್ಫೋಟಕ ಬ್ಯಾಟ್ಸ್’ಮನ್ ಆಗಿ ಬದಲಾಗಿದ್ದಾರೆ. ರಾಂಚಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಸಿಕ್ಸರ್ ಬಾರಿಸುವ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿವೇಗವಾಗಿ 350 ಸಿಕ್ಸರ್ ಸಿಡಿಸಿದ ಕ್ರಿಕೆಟಿಗ ಎನ್ನುವ ಕೀರ್ತಿಗೂ ಭಾಜನರಾಗಿದ್ದರು. ದೀರ್ಘ ಇನ್ನಿಂಗ್ಸ್ ಕಟ್ಟುವ ಕ್ಷಮತೆ ಹೊಂದಿರುವ ರೋಹಿತ್ ಏಕದಿನ ಕ್ರಿಕೆಟ್’ನಲ್ಲಿ 3 ದ್ವಿಶತಕ ಸಿಡಿಸಿದ ಏಕೈಕ ಕ್ರಿಕೆಟಿಗ ಎನ್ನುವ ದಾಖಲೆಯನ್ನೂ ಬರೆದಿದ್ದಾರೆ. ಮೊಹಾಲಿಯಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ 95 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದ ರೋಹಿತ್, ಇದೀಗ ನವದೆಹಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ 8 ಸಾವಿರ ರನ್ ಬಾರಿಸಿದವರ ಕ್ಲಬ್ ಸೇರುವ ಸಾಧ್ಯತೆಯಿದೆ.

ರೋಹಿತ್ ದಾಖಲೆ ಉಡೀಸ್- ಧೋನಿ ಈಗ ಭಾರತದ ಸಿಕ್ಸರ್ ಕಿಂಗ್!

ಇನ್ನು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ರೋಹಿತ್ ಶರ್ಮಾ 46 ರನ್ ಬಾರಿಸಿದರೆ, ಸೌರವ್ ಗಂಗೂಲಿ ಜತೆಗೆ ಅತಿವೇಗವಾಗಿ 8 ಸಾವಿರ ರನ್ ಪೂರೈಸಿದ ಜಂಟಿ 3 ಮೂರನೇ ಆಟಗಾರ ಎನ್ನುವ ಕೀರ್ತಿಗೆ ರೋಹಿತ್ ಪಾತ್ರರಾಗಲಿದ್ದಾರೆ.  ಒಂದು ವೇಳೆ ಈ ಪಂದ್ಯದಲ್ಲಿ 46 ರನ್ ಬಾರಿಸಲು ವಿಫಲವಾದರೆ ಜೂನ್ 05ರ ವರೆಗೂ ಕಾಯಬೇಕಾಗುತ್ತದೆ. ಜೂನ್ 05ರಂದು ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ತನ್ನ ಅಭಿಯಾನ ಆರಂಭಿಸಲಿದೆ.