2ನೇ ಇನಿಂಗ್ಸ್‌ನಲ್ಲೂ ರೋಹಿತ್ ಶತಕ; ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್!

ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಸತತ 2 ಸೆಂಚುರಿ ಸಿಡಿಸೋ ಮೂಲಕ ಹವವು ದಾಖಲೆ ಪುಡಿ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 176 ರನ್ ಸಿಡಿಸಿದ್ದ ರೋಹಿತ್ ಇದೀಗ ಸೆಂಚುರಿ ಬಾರಿಸಿ ಅಬ್ಬರಿಸಿದ್ದಾರೆ. 

Rohit sharma hit 2nd consecutive century against south Africa in vizag test

ವಿಶಾಖಪಟ್ಟಣಂ(ಅ.05): ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ  ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಬೃಹತ್ ಮುನ್ನಡೆಯತ್ತ ಹೆಜ್ಜೆ ಇಟ್ಟಿದೆ. ಶತಕ ಸಿಡಿಸಿದ ರೋಹಿತ್ ಶರ್ಮಾ ಅಪರೂಪದ ದಾಖಲೆ ಬರೆದಿದ್ದಾರೆ. 

ಇದನ್ನೂ ಓದಿ: ರೋಹಿತ್ ಆರ್ಭಟಕ್ಕೆ 25 ವರ್ಷದ ದಾಖಲೆ ಧೂಳೀಪಟ..!

ಆರಂಭಿಕನಾಗಿ ಪದಾರ್ಪಣೆ ಮಾಡಿದ ಪಂದ್ಯದ 2 ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿದ ಮೊದಲ ಭಾರತೀಯ ಅನ್ನೋ ದಾಖಲೆಗೆ ರೋಹಿತ್ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ, ಆರಂಭಿಕನಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲಿ ಗರಿಷ್ಟ ರನ್ ಸಿಡಿಸಿದ ವಿಶ್ವದ ಬ್ಯಾಟ್ಸ್‌ಮನ್ ಅನ್ನೋ ದಾಖಲೆಯನ್ನೂ ಬರೆದಿದ್ದಾರೆ.

ಇದನ್ನೂ ಓದಿ: ರೋಹಿತ್ ಒಂದು ಶತಕ; ಹಲವಾರು ದಾಖಲೆ ನಿರ್ಮಾಣ..!

ಆರಂಭಿಕನಾಗಿ ಚೊಚ್ಚಲ ಪಂದ್ಯದಲ್ಲಿ ಗರಿಷ್ಠ ರನ್ ಸಾಧಕರು;
303 ರೋಹಿತ್ ಶರ್ಮಾ(IND) 176 & 127 v SA, ವೈಜಾಗ್, 2019/20
208 ಕೆಪ್ಲರ್ ವೆಸೆಲ್ಸ್(SA) 162 & 46 v ENG, ಬ್ರಿಸ್ಬೇನ್, 1982/83
201 ಬ್ರೆಂಡನ್ ಕುರುಪ್ಪು(SL) 201* v NZ, ಕೊಲೊಂಬೊ, 1986/87
200 ಆಂಡ್ರ್ಯೂ ಜಾಕ್ಸನ್(AUS) 164 & 36 v ENG, ಆಡಿಲೇಡ್,1928/29
200 ಗೊರ್ಡನ್ ಗ್ರೀನಿಡ್ಜ್(WI) 93 & 107 v IND, ಬೆಂಗಳೂರು, 1974/75

ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್‌ಗಳಲ್ಲಿ ಸೆಂಚುರಿ ಸಿಡಿಸಿದ ಮೊದಲ ಭಾರತೀಯ ರೋಹಿತ್ ಶರ್ಮಾ. ಆದರೆ ದೇಸಿ ಟೂರ್ನಿ 2 ಇನ್ನಿಂಗ್ಸ್‌ಗಳಲ್ಲಿ ಸತತ 2 ಸೆಂಚುರಿ ಸಿಡಿಸಿದವರ ಪೈಕಿ 5ನೇ ಸ್ಥಾನ ಪಡೆದಿದ್ದಾರೆ.

2 ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿದ ಭಾರತೀಯರು(ವಿಜಯ್ ಹಜಾರೆ ಟೂರ್ನಿ)
ಸುನಿಲ್ ಗವಾಸ್ಕರ್(3 ಬಾರಿ)
ರಾಹುಲ್ ದ್ರಾವಿಡ್(2 ಬಾರಿ)
ವಿರಾಟ್ ಕೊಹ್ಲಿ
ಅಜಿಂಕ್ಯ ರಹಾನೆ
ರೋಹಿತ್ ಶರ್ಮಾ

ಅ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ; 

Latest Videos
Follow Us:
Download App:
  • android
  • ios