ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾಗೆ ಹುಟ್ಟು ಹಬ್ಬದ ಸಂಭ್ರಮ. ಈ ಬಾರಿಯ ಬರ್ತ್‌ಡೇ ರೋಹಿತ್ ಪಾಲಿಗೆ ತುಂಬಾನೆ ಸ್ಪೆಷಲ್ ಯಾಕೆ? ರೋಹಿತ್‌ಗೆ ಶುಭಕೋರಿದ ದಿಗ್ಗಜರು ಯಾರು? ಇಲ್ಲಿದೆ ವಿವರ.
ಮುಂಬೈ(ಏ.30): ಟೀಂ ಇಂಡಿಯಾ ಉಪನಯಾಕ, ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮಾಗೆ ಹುಟ್ಟು ಹಬ್ಬದ ಸಂಭ್ರಮ. 32ನೇ ವಸಂತಕ್ಕೆ ಕಾಲಿಟ್ಟಿರುವ ರೋಹಿತ್ ಶರ್ಮಾ, ಕುಟುಂಬ ಸದಸ್ಯರು ಹಾಗೂ ಮುಂಬೈ ಇಂಡಿಯನ್ಸ್ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ರೋಹಿತ್ ಶರ್ಮಾಗೆ ಈ ವರ್ಷದ ಹುಟ್ಟು ಹಬ್ಬ ತುಂಬಾನೆ ಸ್ಪೆಷಲ್. ಕಾರಣ, ಈ ವರ್ಷ ರೋಹಿತ್ ಶರ್ಮಾ ಪುತ್ರಿ ಸಮೈರಾ ಜೊತೆ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ.

ರೋಹಿತ್ ಹುಟ್ಟು ಹಬ್ಬಕ್ಕೆ ಟೀಂ ಇಂಡಿಯಾ ಮಾಜಿ ಹಾಗೂ ಹಾಲಿ, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದದಂತೆ ಅಭಿಮಾನಿಗಳು ಶುಭಕೋರಿದ್ದಾರೆ.
