ರೋಹಿತ್, ಧವನ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬ್ರೆಟ್ ಲೀ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Sep 2018, 1:17 PM IST
Rohit Sharma and Shikhar Dhawan key to India game plan in Asia Cup Says Brett Lee
Highlights

‘ರೋಹಿತ್ ಮತ್ತು ಶಿಖರ್ ಧವನ್, ಏಷ್ಯಾಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ರೋಹಿತ್‌ಗೆ ಹೆಚ್ಚುವರಿಯಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ರೋಹಿತ್ ಸಮತೋಲನ ಕಾಪಾಡಿಕೊಂಡು, ತಮ್ಮ ಸಾಮರ್ಥ್ಯ ಮೆರೆಯಲಿದ್ದಾರೆ’ ಎಂದಿದ್ದಾರೆ.

ಮುಂಬೈ[ಸೆ.7]: ‘ಭಾರತ ತಂಡದ ನಾಯಕ ಕೊಹ್ಲಿ ಅನುಪಸ್ಥಿತಿಯಲ್ಲಿ, ಏಷ್ಯಾಕಪ್ ಟೂರ್ನಿಯಲ್ಲಿ ಹಂಗಾಮಿ ನಾಯಕ ರೋಹಿತ್ ಶರ್ಮಾ ಮತ್ತು ಆರಂಭಿಕ ಶಿಖರ್ ಧವನ್ ಪ್ರಮುಖ ಪಾತ್ರವಹಿಸಲಿದ್ದಾರೆ’ ಎಂದು ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್ ಲೀ ಅಭಿಪ್ರಾಯಪಟ್ಟಿದ್ದಾರೆ. 

ಇದನ್ನು ಓದಿ: ಸೆ.19ಕ್ಕೆ ಭಾರತ-ಪಾಕಿಸ್ತಾನ ಕ್ರಿಕೆಟ್ ಹೋರಾಟ!

‘ರೋಹಿತ್ ಮತ್ತು ಶಿಖರ್ ಧವನ್, ಏಷ್ಯಾಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ರೋಹಿತ್‌ಗೆ ಹೆಚ್ಚುವರಿಯಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ರೋಹಿತ್ ಸಮತೋಲನ ಕಾಪಾಡಿಕೊಂಡು, ತಮ್ಮ ಸಾಮರ್ಥ್ಯ ಮೆರೆಯಲಿದ್ದಾರೆ’ ಎಂದಿದ್ದಾರೆ.

ಇದನ್ನು ಓದಿ: ಏಷ್ಯಾಕಪ್’ಗೆ ಟೀಂ ಇಂಡಿಯಾ ಪ್ರಕಟ: ಕೊಹ್ಲಿಗೆ ರೆಸ್ಟ್, ಕನ್ನಡಿಗನಿಗೆ ಸ್ಥಾನ

ಇದೇ ತಿಂಗಳ 15ರಿಂದ ಯುಎಇನಲ್ಲಿ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್’ಗೆ ನಾಯಕ ಹಾಗೂ ಧವನ್’ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ.

ಇದನ್ನು ಓದಿ: ಭಾರತದ ವೇಗದ ಬೌಲರ್'ಗಳನ್ನು ಪ್ರಶಂಸಿಸಿದ ಬ್ರೆಟ್ ಲೀ

loader