ಅದೇ ರೀತಿ ತಂಡದಲ್ಲಿ  ಶಿಖರ್ ಧವನ್ ಬದಲಿಗೆ ಅಭಿನವ್ ಮುಖುಂದ್'ರನ್ನು ಆಯ್ಕೆ ಮಾಡಲಾಗಿದೆ. ವಿಂಡೀಸ್ ಪ್ರವಾಸದಲ್ಲಿ ಅವಕಾಶ ನೀಡಿದ್ದ ಕುಲ್'ದೀಪ್ ಯಾದವ್ ಅವರನ್ನು ಸಹ ಉಳಿಸಿಕೊಳ್ಳಲಾಗಿದೆ. ಇನ್ನುಳಿದಂತೆ ಭುವನೇಶ್ವರ್ ಕುಮಾರ್, ಮೊಹಮದ್ ಶಮಿ ಹಾಗೂ ಉಮೇಶ್ ಯಾದವ್ ತಂಡದಲ್ಲಿದ್ದಾರೆ.

ಮುಂಬೈ(ಜು.09): ಇನ್ನೇನು ವೆಸ್ಟ್ ಇಂಡೀಸ್ ವಿರುದ್ಧದ ಭಾರತ ಕ್ರಿಕೆಟ್ ತಂಡದ ಪ್ರವಾಸ ಅಂತ್ಯಗೊಳ್ಳಲಿದ್ದು, ಜುಲೈ 26ರಿಂದ ಟೀಂ ಇಂಡಿಯಾ ಮೂರು ಟೆಸ್ಟ್ ಸರಣಿಗಳ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿ ನಾಯಕತ್ವದ 16 ಆಟಗಾರರನ್ನು ಒಳಗೊಂಡ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಒಬ್ಬ ಕನ್ನಡಿಗನಿಗೆ ಅವಕಾಶ ಪಡೆದುಕೊಂಡರೆ ಮತ್ತೊಬ್ಬ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾನೆ.

ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾ ಪ್ರವಾಸದ ನಂತರ ಕೆಳೆದ ಮಾರ್ಚ್ ತಿಂಗಳಿಂದ ಹೊರಗುಳಿದಿದ್ದ ಕನ್ನಡಿಗ ಆಟಗಾರ ಕೆ.ಎಲ್. ರಾಹುಲ್ ಸ್ಥಾನ ಪಡೆದುಕೊಂಡಿದ್ದಾರೆ. ಅದೇ ರೀತಿ ಇನ್ನೊಬ್ಬ ಕನ್ನಡಿಗ ತ್ರಿಶತಕ ಸರದಾರ ಕರುಣಾ ನಾಯರ್ ಅವರಿಗೆ ಕೋಕ್ ನೀಡಿ ಏಕ ದಿನ ಪಂದ್ಯಗಳ ಸ್ಫೋಟಕ ಆಟಗಾರ ರೋಹಿತ್ ಶರ್ಮಾ ಮರಳಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಅದೇ ರೀತಿ ತಂಡದಲ್ಲಿ ಶಿಖರ್ ಧವನ್ ಬದಲಿಗೆ ಅಭಿನವ್ ಮುಖುಂದ್'ರನ್ನು ಆಯ್ಕೆ ಮಾಡಲಾಗಿದೆ. ವಿಂಡೀಸ್ ಪ್ರವಾಸದಲ್ಲಿ ಅವಕಾಶ ನೀಡಿದ್ದ ಕುಲ್'ದೀಪ್ ಯಾದವ್ ಅವರನ್ನು ಸಹ ಉಳಿಸಿಕೊಳ್ಳಲಾಗಿದೆ. ಇನ್ನುಳಿದಂತೆ ಭುವನೇಶ್ವರ್ ಕುಮಾರ್, ಮೊಹಮದ್ ಶಮಿ ಹಾಗೂ ಉಮೇಶ್ ಯಾದವ್ ತಂಡದಲ್ಲಿದ್ದಾರೆ.

ಮೂರು ಟೆಸ್ಟ್ ಪಂದ್ಯಗಳು ಜುಲೈ 26, ಆಗಸ್ಟ್ 3 ಹಾಗೂ 12 ರಂದು ನಡೆಯಲಿವೆ. ಇದಾದ ನಂತರ 5 ಏಕದಿನ ಪಂದ್ಯ ಹಾಗೂ ಏಕೈಕ ಟಿ20 ಪಂದ್ಯವಿರುತ್ತದೆ. ಟೆಸ್ಟ್ ಪಂದ್ಯಗಳು ಆರಂಭವಾಗುವ ಮುನ್ನ ಜುಲೈ 21 ಹಾಗೂ 22 ರಂದು ಕೊಲಂಬೋದಲ್ಲಿ ಅಭ್ಯಾಸ ಪಂದ್ಯಗಳಿರುತ್ತವೆ.

ಆಯ್ಕೆ ಮಾಡಿರುವ ಭಾರತ ತಂಡ

1) ವಿರಾಟ್ ಕೊಹ್ಲಿ(ನಾಯಕ)

2) ಮುರುಳಿ ವಿಜಯ್

3) ಕೆ.ಎಲ್. ರಾಹುಲ್

4) ಚೇತೇಶ್ವರ್ ಪೂಜಾರ

5) ಅಜಿಕ್ಯಾ ರಹಾನೆ

6) ರೋಹಿತ್ ಶರ್ಮಾ

7) ಆರ್. ಅಶ್ವಿನ್

8) ರವೀಂದ್ರ ಜಡೇಜಾ

9) ವೃದ್ಧಿಮಾನ್ ಷಾ(ವಿಕೇಟ್ ಕೀಪರ್)

10) ಇಶಾಂತ್ ಶರ್ಮಾ

11) ಉಮೇಶ್ ಯಾದವ್

12) ಹಾರ್ಧಿಕ್ ಪಾಂಡ್ಯ

13) ಭುವನೇಶ್ವರ್ ಕುಮಾರ್

14) ಮೊಹಮದ್ ಶಮಿ

15) ಕುಲ'ದೀಪ್ ಯಾದವ್

16) ಅಭಿನವ್ ಮುಕುಂದ್