ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ಶಿಖರ್ ಧವನ್ ಹಾಗೂ ನಾಯಕ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ. ರೋಹಿತ್-ಧವನ್ ಅಬ್ಬರಕ್ಕೆ  ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ದಾಖಲೆ ಪುಡಿಯಾಗಿದೆ.

ದುಬೈ(ಸೆ.23): ಪಾಕಿಸ್ತಾನ ವಿರುದ್ದದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ದಾಖಲೆ ಬರೆದಿದ್ದಾರೆ. ಪಾಕ್ ವಿರುದ್ದ ಗರಿಷ್ಠ ಜೊತೆಯಾಟ ನೀಡಿದ ಭಾರತದ ಆರಂಭಿಕರು ಅನ್ನೋ ಹೆಗ್ಗಳಿಕೆಗೆ ರೋಹಿತ್ ಹಾಗೂ ಧವನ್ ಪಾತ್ರರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

238 ರನ್ ಟಾರ್ಗೆಟ್ ಚೇಸ್ ಮಾಡುತ್ತಿರುವ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗಾ ಶಿಖರ್ ಧವನ್ ಅತ್ಯುತ್ತಮ ಆರಂಭ ನೀಡಿದ್ದಾರೆ. ಈ ಜೋಡಿ 210 ರನ್ ಜೊತೆಯಾಟ ನೀಡಿದ್ದಾರೆ. ಈ ಮೂಲಕ ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ.

ಪಾಕಿಸ್ತಾನ ವಿರುದ್ಧ ಭಾರತೀಯ ಆರಂಭಿಕರಲ್ಲಿ ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ 159 ರನ್ ಜೊತೆಯಾಟ ನೀಡೋ ಮೂಲಕ ದಾಖಲೆ ಬರೆದಿದ್ದರು. ಇದೀಗ ಈ ಗರಿಷ್ಠ ಜೊತೆಯಾಟದ ದಾಖಲೆಯನ್ನ ರೋಹಿತ್ ಹಾಗೂ ಧವನ್ ಪುಡಿ ಮಾಡಿದ್ದಾರೆ.

ಪಾಕಿಸ್ತಾನ ವಿರುದ್ಧ ಭಾರತದ ಆರಂಭಿಕರ ಗರಿಷ್ಠ ಜೊತೆಯಾಟ
210 - ರೋಹಿತ್ ಶರ್ಮಾ -ಶಿಖರ್ ಧವನ್ (ದುಬೈ, 2018)
159- ಸೌರವ್ ಗಂಗೂಲಿ-ಸಚಿನ್ ತೆಂಡೂಲ್ಕರ್(ಢಾಕ,1998)
155-ಗೌತಮ್ ಗಂಭೀರ್-ವಿರೇಂದ್ರ ಸೆಹ್ವಾಗ್(ಢಾಕ,2008)