ಈ ಋತುವಿನಲ್ಲಿ ಬೋಪಣ್ಣ-ಕ್ಯೂವಾಸ್ ಜೋಡಿಗಿದು ಮೊದಲ ಪ್ರಶಸ್ತಿಯಾಗಿದ್ದು, ಭಾರತೀಯ ಆಟಗಾರನಿಗೆ ವಯಕ್ತಿಕವಾಗಿ ಮೂರನೇ ಪ್ರಶಸ್ತಿಯಾಗಿದೆ.
ಮೊನಾಕೊ(ಏ.23): ಭಾರತದ ರೋಹನ್ ಬೋಪಣ್ಣ ಹಾಗೂ ಅವರ ಉರುಗ್ವೆಯ ಜೊತೆಗಾರ ಪಾಬ್ಲೊ ಕ್ಯೂವಾಸ್ ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಒಂದು ಗಂಟೆ 14 ನಿಮಿಷ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್'ನ ಫೆಲಿಸಿಯಾನೊ ಲೊಪೆಜ್ ಹಾಗೂ ಮಾರ್ಕ್ ಲೊಪೆಜ್ ಜೋಡಿ ವಿರುದ್ಧ ಹೋರಾಡಿದ ಶ್ರೇಯಾಂಕ ರಹಿತ ಬೋಪಣ್ಣ-ಕ್ಯೂವಾಸ್ ಜೋಡಿ 6-3,3-6,10-4 ಸೆಟ್'ಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಈ ಋತುವಿನಲ್ಲಿ ಬೋಪಣ್ಣ-ಕ್ಯೂವಾಸ್ ಜೋಡಿಗಿದು ಮೊದಲ ಪ್ರಶಸ್ತಿಯಾಗಿದ್ದು, ಭಾರತೀಯ ಆಟಗಾರನಿಗೆ ವಯಕ್ತಿಕವಾಗಿ ಮೂರನೇ ಪ್ರಶಸ್ತಿಯಾಗಿದೆ.
ರೋಹನ್ ಬೋಪಣ್ಣ ಗೆಲುವನ್ನು ಹಿರಿಯ ಟೆನಿಸ್ ಆಟಗಾರ ಟ್ವಿಟ್ಟರ್'ನಲ್ಲಿ ಸಂಭ್ರಮಿಸಿದ್ದು ಹೀಗೆ...