Asianet Suvarna News Asianet Suvarna News

ಮೂರನೇ ಸ್ಥಾನಕ್ಕೇರಿದ ರೋಜರ್ ಫೆಡರರ್

2017ರಲ್ಲಿ ಎರಡು ಗ್ರ್ಯಾಂಡ್‌'ಸ್ಲಾಂ ಸೇರಿ ಒಟ್ಟು 5 ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್ ಮತ್ತೊಮ್ಮೆ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ನಿರೀಕ್ಷೆ ಹುಟ್ಟಿಸಿದ್ದಾರೆ.

Roger Federer targets No 1 ranking after claiming eighth Wimbledon title
  • Facebook
  • Twitter
  • Whatsapp

ಲಂಡನ್(ಜು.17): ದಾಖಲೆಯ 8ನೇ ವಿಂಬಲ್ಡನ್ ಗೆದ್ದ ರೋಜರ್ ಫೆಡರರ್ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ಥಾನಗಳ ಜಿಗಿತ ಕಂಡು 3ನೇ ಸ್ಥಾನಕ್ಕೇರಿದ್ದಾರೆ.

15 ಆಗಸ್ಟ್ 2016ರ ಬಳಿಕ ಮೊದಲ ಬಾರಿಗೆ ಅಗ್ರ ಮೂರರಲ್ಲಿ ಸ್ವಿಸ್ ತಾರೆ ಫೆಡರರ್ ಸ್ಥಾನ ಪಡೆದಿದ್ದಾರೆ. ಫೈನಲ್ ಪಂದ್ಯದಲ್ಲಿ ಫೆಡರರ್ ಕ್ರೊವೇಷಿಯಾದ ಮರಿನ್ ಸಿಲಿಚ್ ವಿರುದ್ಧ ನೇರ ಸೆಟ್‌'ಗಳಲ್ಲಿ ಗೆಲುವು ಸಾಧಿಸಿ 19ನೇ ಗ್ರ್ಯಾಂಡ್‌'ಸ್ಲಾಂ ಪ್ರಶಸ್ತಿ ಗೆದ್ದಿದ್ದರು.

2017ರಲ್ಲಿ 2 ಗ್ರ್ಯಾಂಡ್‌'ಸ್ಲಾಂ ಸೇರಿ ಒಟ್ಟು 5 ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್ ಮತ್ತೊಮ್ಮೆ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ನಿರೀಕ್ಷೆ ಹುಟ್ಟಿಸಿದ್ದಾರೆ. ಆ್ಯಂಡಿ ಮರ್ರೆ ಅಗ್ರಸ್ಥಾನದಲ್ಲಿ ಮುಂದುವರಿದರೆ, ನಡಾಲ್ 2, ಜೋಕೋವಿಚ್ 4ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಮತ್ತೊಬ್ಬ ಸ್ವಿಸ್ ಆಟಗಾರ ವಾವ್ರಿಂಕಾ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.

Follow Us:
Download App:
  • android
  • ios