18 ಗ್ರ್ಯಾಂಡ್‌'ಸ್ಲಾಂಗಳ ಒಡೆಯ ಫೆಡರರ್ ತಮ್ಮ ನಿವೃತ್ತಿಯನ್ನು ಮತ್ತಷ್ಟು ವರ್ಷಗಳ ಕಾಲ ಮುಂದೂಡಲು ನಿರ್ಧರಿಸಿದ್ದು, ಆಯ್ದ ಪಂದ್ಯಾವಳಿಗಳಲ್ಲಿ ಮಾತ್ರ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಪ್ಯಾರಿಸ್(ಮೇ.16): ವಿಂಬಲ್ಡನ್ ಗ್ರ್ಯಾಂಡ್ ಸ್ಲಾಂಗೆ ತಯಾರಿ ನಡೆಸುವ ಉದ್ದೇಶದಿಂದ ರೋಜರ್ ಫೆಡರರ್ ಈ ವರ್ಷದ ಫ್ರೆಂಚ್ ಓಪನ್ ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿ ಆವೆ ಮಣ್ಣಿನ ಅಂಕಣದಿಂದ ಸ್ವಿಸ್ ಆಟಗಾರ ಹಿಂದೆ ಸರಿದಂತಾಗಿದೆ. ಕಳೆದ ವರ್ಷ ಕೂಡ ಗಾಯದ ಸಮಸ್ಯೆಯಿಂದಾಗಿ ಫ್ರೆಂಚ್ ಓಪನ್ ಟೂರ್ನಿಯಿಂದ ಹೊರಗುಳಿದಿದ್ದರು.

18 ಗ್ರ್ಯಾಂಡ್‌'ಸ್ಲಾಂಗಳ ಒಡೆಯ ಫೆಡರರ್ ತಮ್ಮ ನಿವೃತ್ತಿಯನ್ನು ಮತ್ತಷ್ಟು ವರ್ಷಗಳ ಕಾಲ ಮುಂದೂಡಲು ನಿರ್ಧರಿಸಿದ್ದು, ಆಯ್ದ ಪಂದ್ಯಾವಳಿಗಳಲ್ಲಿ ಮಾತ್ರ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಗಾಯದ ಸಮಸ್ಯೆಯಿಂದಾಗಿ ಕೆಲಕಾಲ ಟೆನಿಸ್'ನಿಂದ ದೂರ ಉಳಿದಿದ್ದ ಫೆಡರರ್, 2016ರಲ್ಲಿ ರಾಡ್ ಲಾವೆರ್ ಅರೇನಾ ಕೋರ್ಟ್'ನಲ್ಲಿ ರಫೇಲ್ ನಡಾಲ್ ಅವರನ್ನು ಮಣಿಸಿ 18ನೇ ಗ್ರ್ಯಾಂಡ್'ಸ್ಲಾಂ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಆ ಬಳಿಕ ಇಂಡಿಯನ್ ವೇಲ್ಸ್, ಮಿಯಾಮಿ ಚಾಂಪಿಯನ್'ಶಿಪ್'ನಲ್ಲೂ ಫೆಡರರ್ ಪ್ರಶಸ್ತಿ ಜಯಿಸಿದ್ದರು.