ಟೆನಿಸ್: ವಿಶ್ವ ನಂ.1 ಪಟ್ಟ ಕಳೆದುಕೊಂಡ ಫೆಡರರ್!

Roger Federer loses world No 1 spot after Coric defeat
Highlights

ಕ್ರೊವೇಷಿಯಾದ 21 ವರ್ಷದ ಬೊರ್ನಾ ಕೋರಿಚ್ ವಿರುದ್ಧ ಇಲ್ಲಿ ನಡೆದ ಹಾಲೆ ಓಪನ್ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ರೋಜರ್ ಫೆಡರರ್, ವಿಶ್ವ ನಂ.1 ಸ್ಥಾನ ಕಳೆದುಕೊಂಡಿದ್ದಾರೆ. 

ಹಾಲೆ[ಜೂ.25]: ಕ್ರೊವೇಷಿಯಾದ 21 ವರ್ಷದ ಬೊರ್ನಾ ಕೋರಿಚ್ ವಿರುದ್ಧ ಇಲ್ಲಿ ನಡೆದ ಹಾಲೆ ಓಪನ್ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ರೋಜರ್ ಫೆಡರರ್, ವಿಶ್ವ ನಂ.1 ಸ್ಥಾನ ಕಳೆದುಕೊಂಡಿದ್ದಾರೆ. 

7-6, 3-6, 6-2 ಸೆಟ್‌ಗಳಿಂದ ಗೆಲುವು ಸಾಧಿಸಿದ ಕೋರಿಚ್, ಫೆಡರರ್ ವೃತ್ತಿ ಬದುಕಿನ 99ನೇ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ವಿಫಲಗೊಳಿಸಿದರು. 

ಸೋಮವಾರ ಪ್ರಕಟಗೊಳ್ಳಲಿರುವ ನೂತನ ಎಟಿಪಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ರಾಫೆಲ್ ನಡಾಲ್ ಮತ್ತೆ ಅಗ್ರಸ್ಥಾನಕ್ಕೇರಲಿದ್ದಾರೆ.

loader