ಇಂಡಿಯನ್ ವೆಲ್ಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ನಡಾಲ್ ವಿರುದ್ಧ ಜಯಿಸಿದ್ದ ಫೆಡರರ್, ಫೈನಲ್‌'ನಲ್ಲಿ ತಮ್ಮ ದೇಶದವರೇ ಆದ ಸ್ಟ್ಯಾನಿಸ್ಲಾಸ್ ವಾವ್ರಿಂಕ ವಿರುದ್ಧ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟಿದ್ದರು.

ಲಂಡನ್(ಮಾ.22): ಇಂಡಿಯನ್ ವೆಲ್ಸ್‌'ನಲ್ಲಿ ದಾಖಲೆಯ 5ನೇ ಪ್ರಶಸ್ತಿ ಗೆದ್ದ ಸ್ವಿಟ್ಜರ್‌ಲೆಂಡ್‌'ನ ರೋಜರ್ ಫೆಡರರ್ ಎಟಿಪಿ ಶ್ರೇಯಾಂಕದಲ್ಲಿ ನಾಲ್ಕು ಸ್ಥಾನಗಳ ಏರಿಕೆ ಕಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರೊಂದಿಗೆ 4,305 ಅಂಕಗಳೊಂದಿಗೆ ಫೆಡರರ್ ತಮ್ಮ ಪ್ರಬಲ ಸ್ಪರ್ಧಿ ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ್ದಾರೆ.

ಇಂಡಿಯನ್ ವೆಲ್ಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ನಡಾಲ್ ವಿರುದ್ಧ ಜಯಿಸಿದ್ದ ಫೆಡರರ್, ಫೈನಲ್‌'ನಲ್ಲಿ ತಮ್ಮ ದೇಶದವರೇ ಆದ ಸ್ಟ್ಯಾನಿಸ್ಲಾಸ್ ವಾವ್ರಿಂಕ ವಿರುದ್ಧ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಬ್ರಿಟನ್‌'ನ ಆ್ಯಂಡಿ ಮರ್ರೆ ಇಂಡಿಯನ್ ವೆಲ್ಸ್‌'ನ 2ನೇ ಸುತ್ತಿನಲ್ಲೇ ಪರಾಭವಗೊಂಡರೂ, ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ಇನ್ನು ಸರ್ಬಿಯಾದ ನೊವಾಕ್ ಜೊಕೊವಿಚ್ 2ನೇ ಸ್ಥಾನದಲ್ಲಿ ಮುಂದುವರಿದರೆ, 3ನೇ ಸ್ಥಾನದಲ್ಲಿ ವಾವ್ರಿಂಕ ಇದ್ದಾರೆ.