9ನೇ ವಿಂಬಲ್ಡನ್ ಗೆಲುವಿನ ಕನಸಿನಲ್ಲಿರುವ ಟೆನಿಸ್ ಮಾಂತ್ರಿಕ ಫೆಡರರ್ ಭಾರತ ಮೂಲದ ಟೆನಿಸ್ ಅಭಿಮಾನಿಗೆ ವಿಶೇಷ ಗಿಫ್ಟ್ ನೀಡುವ ವಿಡಿಯೋ ವೈರಲ್  

ಲಂಡನ್: ಅಂಕಣದಲ್ಲಿ ತಮ್ಮ ಸೊಗಸಾದ ಆಟದ ನೆರವಿನಿಂದ ಗೆದ್ದಿರುವ ಫೆಡರರ್, ಅಂಕಣದ ಹೊರಗೂ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಹಿಂದೆ ಬಿದ್ದಿಲ್ಲ.

9ನೇ ವಿಂಬಲ್ಡನ್ ಗೆಲುವಿನ ಕನಸಿನಲ್ಲಿರುವ ಫೆಡರರ್, ಈ ಬಾರಿ ಭಾರತ ಮೂಲದ ಟೆನಿಸ್ ಅಭಿಮಾನಿಯೊಬ್ಬಳಿಗೆ ತಮ್ಮ ‘ಹೆಡ್‌ಬ್ಯಾಂಡ್’ ನೀಡಿ ಗಮನ ಸೆಳೆದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Scroll to load tweet…

ವಿಡಿಯೋದಲ್ಲಿ ‘ನನಗೆ ನಿಮ್ಮ ಹೆಡ್ ಬ್ಯಾಂಡ್ ಸಿಗುತ್ತದೇಯೇ?’ ಎಂದು ಬರೆದಿದ್ದ ಪೋಸ್ಟರ್ ಹಿಡಿದು ನಿಂತಿದ್ದ ಬಾಲಕಿಯನ್ನು ಪಂದ್ಯದ ವೇಳೆ ಗಮನಿಸಿದ್ದ ಫೆಡರರ್, ಹತ್ತಿರ ಬಂದು ತಮ್ಮ ಹೆಡ್‌ಬ್ಯಾಂಡ್ ನೀಡಿದ್ದರು. 

ಈ ವಿಡಿಯೋ ನೋಡಿ ಟ್ವೀಟರ್‌ನಲ್ಲಿ ಬರೆದಿರುವ ಭಾರತ ಸಂಜಾತ ಅಭಿಜೀತ್ ಜೋಶಿ, ‘ಹೆಡ್‌ಬ್ಯಾಂಡ್ ಪಡೆದಿರುವ ಬಾಲಕಿ ನನ್ನ ಮಗಳು. ಫೆಡರರ್‌ನ ದೊಡ್ಡ ಅಭಿಮಾನಿ. ಫೆಡರರ್‌ಗೆ ಧನ್ಯವಾದ’ ಎಂದಿದ್ದಾರೆ.