Asianet Suvarna News Asianet Suvarna News

ಇಂಡಿಯನ್ ವೇಲ್ಸ್: ನಡಾಲ್ ಮಣಿಸಿದ ಫೆಡರರ್

ಇದೇ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್'ನಲ್ಲಿ ನಡಾಲ್ ಅವರನ್ನು ಮಣಿಸಿದ್ದ ಫೆಡರರ್ ಈಗ ಮತ್ತೊಮ್ಮೆ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಸೋಲಿನ ರುಚಿ ತೋರಿಸಿದ್ದಾರೆ.

Roger Federer cruises past Rafael Nadal to reach Indian Wells quarters

ಕ್ಯಾಲಿಫೋರ್ನಿಯಾ(ಮಾ.16): ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ರಾಫೇಲ್ ನಡಾಲ್ ಅವರನ್ನು  ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟೆನಿಸ್ ರಂಗದ ದಿಗ್ಗಜರಾದ ರಾಫೇಲ್ ನಡಾಲ್ ಮತ್ತು ರೋಜರ್ ಫೆಡರರ್ ನಡುವಿನ ಹೋರಾಟಕ್ಕೆ ಇಂಡಿಯನ್ ವೇಲ್ಸ್ ಟೂರ್ನಿ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಫೆಡರರ್ ಸ್ಪೇನ್'ನ ಎಡಗೈ ಆಟಗಾರ ನಡಾಲ್ ಅವರನ್ನು 6-2, 6-3 ನೇರ ಸೆಟ್'ಗಳ ಮೂಲಕ ಸೋಲಿಸಿದರು. ಈ ಮೂಲಕ ರೋಜರ್ ಫೆಡರರ್ ಟೂರ್ನಿಯಲ್ಲಿ ಕ್ವಾರ್ಟರ್'ಫೈನಲ್ ತಲುಪುವಲ್ಲಿ ಯಶಸ್ವಿಯಾದರು.

ಇನ್ನು ಸ್ವಿಸ್ ದಂತಕತೆ ಫೆಡರರ್, ವಿಶ್ವದ ನಂ.2 ಶ್ರೇಯಾಂಕಿತ ನೋವಾಕ್ ಜೋಕೋವಿಕ್ ಅವರನ್ನು ಮಣಿಸಿರುವ ಆಸ್ಟ್ರೇಲಿಯಾದ ನಿಕ್ ಕೈರ್ಗೋಯಿಸ್ ಅವರನ್ನು ಎದುರಿಸಲಿದ್ದಾರೆ.

ಇದೇ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್'ನಲ್ಲಿ ನಡಾಲ್ ಅವರನ್ನು ಮಣಿಸಿದ್ದ ಫೆಡರರ್ ಈಗ ಮತ್ತೊಮ್ಮೆ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಸೋಲಿನ ರುಚಿ ತೋರಿಸಿದ್ದಾರೆ.

Follow Us:
Download App:
  • android
  • ios