ತೀವ್ರ ಕುತೂಹಲದಿಂದ ಕೂಡಿದ್ದ ಕೊನೆಯ ಸೆಟ್ ಕೈವಶ ಮಾಡಿಕೊಳ್ಳುವಲ್ಲಿ ಕೊನೆಗೂ ರಷ್ಯಾ ಆಟಗಾರ ಸಫಲರಾದರು.

ದುಬೈ(ಮಾ.02): ವಿಶ್ವದ ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ರಷ್ಯಾದ 116ನೇ ಶ್ರೇಯಾಂಕಿತ ಇವೆಜ್ನಿ ಡೋನ್ಸ್'ಕಿ ಕ್ವಾರ್ಟರ್ ಫೈನಲ್'ನಲ್ಲಿ ಮುಗ್ಗರಿಸಿದ್ದಾರೆ.

ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಎತ್ತಿಹಿಡಿಯುವ ಮೂಲಕ 18ನೇ ಗ್ರ್ಯಾನ್'ಸ್ಲಾಂಗೆ ಮುತ್ತಿಕ್ಕಿದ್ದ ಫೆಡರರ್ ರಷ್ಯಾ ಎದುರಾಳಿ ವಿರುದ್ಧ 3-6, 7-6(9/7), 7-6(7/5) ಸೆಟ್'ಗಳಲ್ಲಿ ಸೋಲೊಪ್ಪಿಕೊಂಡಿದ್ದಾರೆ.

ಮೊದಲ ಸೆಟ್'ನಲ್ಲಿ ಭರ್ಜರಿ ಮುನ್ನೆಡೆ ಸಾಧಿಸಿದ್ದ ಸ್ವಿಸ್ ಆಟಗಾರನಿಗೆ ಎರಡು ಹಾಗೂ ಮೂರನೇ ಸೆಟ್'ನಲ್ಲಿ ಶಾಕ್ ನೀಡುವಲ್ಲಿ ಇವೆಜ್ನಿ ಡೋನ್ಸ್'ಕಿ ಯಶಸ್ವಿಯಾದರು. ತೀವ್ರ ಕುತೂಹಲದಿಂದ ಕೂಡಿದ್ದ ಕೊನೆಯ ಸೆಟ್ ಕೈವಶ ಮಾಡಿಕೊಳ್ಳುವಲ್ಲಿ ಕೊನೆಗೂ ರಷ್ಯಾ ಆಟಗಾರ ಸಫಲರಾದರು.