ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬ್ಡಲನ್ ಕೀರಿಟ ಮುಡಿಗೇರಿಸಿಕೊಂಡಿರುವ ಸ್ವಿಸ್ ತಾರೆ ಫೆಡರರ್ ಇದೀಗ ಮತ್ತೊಂದು ಚಾಂಪಿಯನ್‌'ಶಿಪ್ ಅನ್ನು ತಮ್ಮದಾಗಿಸಿಕೊಳ್ಳುವ ತವಕದಲ್ಲಿದ್ದಾರೆ. ಅಲ್ಲದೆ ಯುಎಸ್ ಓಪನ್ ಟೂರ್ನಿಗೆ ಭರ್ಜರಿ ಅಭ್ಯಾಸ ನಡೆಸಿದ್ದಾರೆ.
ಮಾಂಟ್ರಿಯಲ್(ಆ.13): ಸ್ವಿಸ್ ಟೆನಿಸ್ ದಂತಕತೆ, ಹಾಲಿ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್ ರೋಜರ್ಸ್ ಕಪ್ ಟೆನಿಸ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದರು.
ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ನೆದರ್'ಲ್ಯಾಂಡ್'ನ ರಾಬಿನ್ ಹಾಸೆಯನ್ನು 6-3, 7-6(5) ಸೆಟ್'ಗಳ ಅಂತರದಿಂದ ಮಣಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಈ ವರ್ಷದಲ್ಲಿ ಫೆಡರರ್ ೬ನೇ ಬಾರಿಗೆ ಫೆಡರರದ ಫೈನಲ್ ಪ್ರವೇಶಿಸಿದಂತಾಗಿದೆ. ಅಲ್ಲದೇ ಫೆಡರರ್ ಸಾಧಿಸಿದ ಸತತ 16ನೇ ಗೆಲುವು ಇದಾಗಿದೆ.
ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬ್ಡಲನ್ ಕೀರಿಟ ಮುಡಿಗೇರಿಸಿಕೊಂಡಿರುವ ಸ್ವಿಸ್ ತಾರೆ ಫೆಡರರ್ ಇದೀಗ ಮತ್ತೊಂದು ಚಾಂಪಿಯನ್'ಶಿಪ್ ಅನ್ನು ತಮ್ಮದಾಗಿಸಿಕೊಳ್ಳುವ ತವಕದಲ್ಲಿದ್ದಾರೆ. ಅಲ್ಲದೆ ಯುಎಸ್ ಓಪನ್ ಟೂರ್ನಿಗೆ ಭರ್ಜರಿ ಅಭ್ಯಾಸ ನಡೆಸಿದ್ದಾರೆ.
ಮತ್ತೊಂದು ಸೆಮಿಫೈನಲ್'ನಲ್ಲಿ ಇಸ್ರೇಲ್ನ ಡೆನಿಸ್ ಶಪೊವೊಲೋವ್'ರನ್ನು 6-4, 7-5 ಸೆಟ್'ಗಳ ಅಂತರದಿಂದ ಮಣಿಸಿದ ಜರ್ಮನಿಯ ಅಲೆಕ್ಸಾಂಡರ್ ಝರೆವ್ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಫೆಡರರ್ ಜತೆ ಸೆಣಸಾಟ ನಡೆಸಲಿದ್ದಾರೆ.
