ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ವಿಶ್ವದ ನಂ.1 ಆಟಗಾರ ನಡಾಲ್ ಹಾಗೂ ನಂ.2 ಆಟಗಾರ ಫೆಡರರ್ ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದು, ಅವರಿಬ್ಬರ ಪಂದ್ಯ ವೀಕ್ಷಿಸಲು ಟೆನಿಸ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಶಾಂಘೈ(ಅ.14): ಟೆನಿಸ್ ಲೋಕದ ದಿಗ್ಗಜ ಆಟಗಾರರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ನಡುವಿನ ಹೋರಾಟಕ್ಕೆ ವೇದಿಕೆ ಸಿದ್ದವಾಗಿದೆ.
ಹೌದು, ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ವಿಶ್ವದ ನಂ.1 ಆಟಗಾರ ನಡಾಲ್ ಹಾಗೂ ನಂ.2 ಆಟಗಾರ ಫೆಡರರ್ ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದು, ಅವರಿಬ್ಬರ ಪಂದ್ಯ ವೀಕ್ಷಿಸಲು ಟೆನಿಸ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫೆಡರರ್ ಹಾಗೂ ನಡಾಲ್ ಇಬ್ಬರು ಅನಾಯಾಸವಾಗಿ ಜಯಭೇರಿ ಬಾರಿಸಿ ಫೈನಲ್ ಪ್ರವೇಶಿಸಿದ್ದಾರೆ.
ಸ್ವಿಸ್ ಟೆನಿಸಿಗ ಫೆಡರರ್ 6-3, 6-3, 6-3 ಸೆಟ್'ಗಳಿಂದ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಗೆಲುವಿನ ನಗೆ ಬೀರಿದರೆ, ಮರಿನ್ ಸಿಲಿಚ್ ವಿರುದ್ಧ ನಡಾಲ್ 7-5, 7-6 ಸೆಟ್'ಗಳಲ್ಲಿ ಜಯ ಸಾಧಿಸಿದರು.
ಇನ್ನು ಶಾಂಘೈ ಮಾಸ್ಟರ್ಸ್ ಚಾಂಪಿಯನ್ ಆಗುವ ಆಟಗಾರನಿಗೆ ₹7.71 ಕೋಟಿ ಬಹುಮಾನ ಸಿಗಲಿದೆ.
