ಐದು ಬಾರಿ ಯುಎಸ್ ಓಪನ್ ಚಾಂಪಿಯನ್ ರೋಜರ್ ಫೆಡರರ್ ಮೂರನೇ ಸುತ್ತಿನ ಪಂದ್ಯದಲ್ಲಿ 31ನೇ ಶ್ರೇಯಾಂಕಿತ ಆಟಗಾರ ಫೆಲಿಸಿಯಾನೊ ಲೊಪೆಜ್ ವಿರುದ್ಧ 6-3, 6-3, 7-5 ನೇರ ಸೆಟ್‌'ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ನ್ಯೂಯಾರ್ಕ್(ಸೆ.03): ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ನಡುವಿನ ಕಾದಾಟಕ್ಕೆ ವೇದಿಕೆ ಸಿದ್ದವಾಗುತ್ತಿದೆ.

ಹೌದು, ಸ್ವಿಸ್ ತಾರೆ ಫೆಡರರ್ ಹಾಗೂ ಸ್ಪೇನ್ ಎಡಗೈ ಟೆನಿಸಿಗ ನಡಾಲ್ ಯುಎಸ್ ಓಪನ್'ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮೂರನೇ ಸುತ್ತಿನ ಪಂದ್ಯದಲ್ಲಿ ನಡಾಲ್ ಅರ್ಜೆಂಟೀನಾದ ಲಿಯನಾರ್ಡೊ ಮೇಯರ್ ವಿರುದ್ಧ 6-7(3/7), 6-3, 6-1, 6-4 ಸೆಟ್‌'ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟರು. ಕ್ವಾರ್ಟರ್ ಫೈನಲ್ ಸ್ಥಾನಕ್ಕಾಗಿ ನಡಾಲ್ ಉಕ್ರೇನ್‌'ನ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ವಿರುದ್ಧ ಸೆಣಸಾಡಲಿದ್ದಾರೆ.

ಇದೇ ವೇಳೆ ಐದು ಬಾರಿ ಯುಎಸ್ ಓಪನ್ ಚಾಂಪಿಯನ್ ರೋಜರ್ ಫೆಡರರ್ ಮೂರನೇ ಸುತ್ತಿನ ಪಂದ್ಯದಲ್ಲಿ 31ನೇ ಶ್ರೇಯಾಂಕಿತ ಆಟಗಾರ ಫೆಲಿಸಿಯಾನೊ ಲೊಪೆಜ್ ವಿರುದ್ಧ 6-3, 6-3, 7-5 ನೇರ ಸೆಟ್‌'ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಮುಂದಿನ ಸುತ್ತಿನಲ್ಲಿ ಸ್ವಿಟ್ಜರ್‌'ಲೆಂಡ್ ಆಟಗಾರ ಫಿಲಿಪ್ ಕೊಲ್‌'ಶ್ರಿಬರ್ ಅವರನ್ನು ಎದುರಿಸಲಿದ್ದಾರೆ.