ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಾಡ್ ಲೇವರ್ ಹೆಸರಿನಲ್ಲಿ ಟೂರ್ನಿ ನಡೆಯುತ್ತಿದೆ.

ಲಂಡನ್(ಫೆ.22): ದೀರ್ಘಕಾಲದ ಎದುರಾಳಿ ಮತ್ತು ಆಪ್ತ ಸ್ನೇಹಿತ ರಾಫೆಲ್ ನಡಾಲ್ ನನ್ನ ಕನಸಿನ ಡಬಲ್ಸ್ ಜತೆಗಾರ ಎಂದು ಸ್ವಿಟ್ಜರ್‌ಲೆಂಡ್‌ನ ಸ್ಟಾರ್ ಟೆನಿಸಿಗ ರೋಜರ್ ಫೆಡರರ್ ಹೇಳಿದ್ದಾರೆ.

ಪ್ರಸಕ್ತ ವರ್ಷದ ಸೆಪ್ಟೆಂಬರ್ ವೇಳೆ ನಡೆಯಲಿರುವ ರಾಡ್ ಲೇವರ್ ಕಪ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌'ನ ಆಟಗಾರ ನಡಲ್ ಹಾಗೂ ಫೆಡರರ್ ಇಬ್ಬರು ಜತೆಯಾಗಿ ಯುರೋಪ್ ತಂಡವಾದ ಬಿಜಾರ್ನ್ ಬೋರ್ಗ್ಸ್ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ. ‘‘ರಾಫೇಲ್ ನಡಾಲ್'ರಂಥ ಶ್ರೇಷ್ಟ ಪ್ರತಿಸ್ಪರ್ಧಿಯೊಂದಿಗಿನ ಪ್ರತೀ ಕಾದಾಟವೂ ವಿಶೇಷವೇ’’ ಎಂದು ಫೆಡರರ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಾಡ್ ಲೇವರ್ ಹೆಸರಿನಲ್ಲಿ ಟೂರ್ನಿ ನಡೆಯುತ್ತಿದೆ.