ಭಾರತ ವನಿತಾ ಹಾಕಿ ತಂಡಕ್ಕೆ ಇದೀಗ ಮಾಜಿ ನಾಯಕಿ ರಿತು ರಾಣಿ ಅವರ ಆಗಮನದಿಂದ ಇನ್ನಷ್ಟು ಬಲ ಬಂದಂತಾಗಿದೆ.
ನವದೆಹಲಿ(ಮಾ.09): ರಿಯೊ ಒಲಿಂಪಿಕ್ಸ್ ಕೂಟದಿಂದ ತನ್ನನ್ನು ಕೈಬಿಡಲಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದ ಮಾಜಿ ಆಟಗಾರ್ತಿ ರಿತು ರಾಣಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.
ಇದೇ ಏಪ್ರಿಲ್ 1ರಿಂದ ಕೆನಡಾದ ಪಶ್ಚಿಮ ವಾಂಕೋವರ್'ನಲ್ಲಿ ಆರಂಭವಾಗಲಿರುವ ಎರಡನೇ ಸುತ್ತಿನ ವನಿತಾ ಹಾಕಿ ವಿಶ್ವ ಲೀಗ್ ಪಂದ್ಯಾವಳಿಗೆ ಪ್ರಕಟಿಸಲಾಗಿರುವ ಹದಿನೆಂಟು ಆಟಗಾರ್ತಿಯರ ಪೈಕಿ ರಿತುಗೆ ಸ್ಥಾನ ಕಲ್ಪಿಸಲಾಗಿದೆ.
ಇತ್ತೀಚೆಗಷ್ಟೇ ಭೋಪಾಲ್'ನಲ್ಲಿ ಮುಕ್ತಾಯ ಕಂಡ ಪ್ರವಾಸಿ ಬೆಲಾರಸ್ ವಿರುದ್ಧದ ಐದು ಪಂದ್ಯ ಸರಣಿಯನ್ನು 5-0 ಅಂತರದೊಂದಿಗೆ ಕ್ಲೀನ್'ಸ್ವೀಪ್ ಮಾಡಿದ ಭಾರತ ವನಿತಾ ಹಾಕಿ ತಂಡಕ್ಕೆ ಇದೀಗ ಮಾಜಿ ನಾಯಕಿ ರಿತು ರಾಣಿ ಅವರ ಆಗಮನದಿಂದ ಇನ್ನಷ್ಟು ಬಲ ಬಂದಂತಾಗಿದೆ.
ತಂಡ ಇಂತಿದೆ
ಗೋಲ್‌ಕೀಪರ್ಸ್: ಸವಿತಾ, ರಜನಿ ಎಟಿಮರ್ಪು; ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ, ಸುನಿತಾ ಲಕ್ರಾ, ಗುರ್ಜಿತ್ ಕೌರ್, ರೇಣುಕಾ ಯಾದವ್, ಲಾಲ್'ಲುನ್ಮಾವಿ; ಮಿಡ್‌ಫೀಲ್ಡರ್ಸ್: ರಾಣಿ, ವಂದನಾ ಕಟಾರಿಯಾ, ಪೂನಂ ರಾಣಿ, ಸೋನಿಕಾ, ಅನುಪಾ ಬಾರ್ಲಾ.
