Asianet Suvarna News Asianet Suvarna News

ಮುಂಬೈ ಮಣಿಸಿದ ಸೂಪರ್'ಜೈಂಟ್ ಫೈನಲ್'ಗೆ ಲಗ್ಗೆ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪುಣೆ ಸೂಪರ್'ಜೈಂಟ್ 162 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಆತಿಥೇಯ ಮುಂಬೈ ತಂಡ ತವರಿನಲ್ಲಿ 142ರನ್ ಬಾರಿಸಲಷ್ಟೇ ಶಕ್ತವಾಯಿತು.

Rising Pune Supergiant complete comeback win against Mumbai Indians
  • Facebook
  • Twitter
  • Whatsapp

ಮುಂಬೈ(ಮೇ.16): ತೀವ್ರ ಕುತೂಹಲ ಕೆರಳಿಸಿದ್ದ 10ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಪುಣೆ ಸೂಪರ್'ಜೈಂಟ್ಸ್ ಫೈನಲ್'ಗೆ ಲಗ್ಗೆಯಿಟ್ಟಿದೆ.

ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಮೊದಲ ಪ್ಲೇ-ಆಫ್ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪುಣೆ 20ರನ್'ಗಳ ಭರ್ಜರಿ ಜಯ ದಾಖಲಿಸಿತು. ಆ ಮೂಲಕ ಮೊದಲ ತಂಡವಾಗಿ 10ನೇ ಆವೃತ್ತಿಯ ಐಪಿಎಲ್ ಫೈನಲ್'ಗೆ ಲಗ್ಗೆಯಿಟ್ಟಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪುಣೆ ಸೂಪರ್'ಜೈಂಟ್ 162 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಆತಿಥೇಯ ಮುಂಬೈ ತಂಡ ತವರಿನಲ್ಲಿ 142ರನ್ ಬಾರಿಸಲಷ್ಟೇ ಶಕ್ತವಾಯಿತು.

Follow Us:
Download App:
  • android
  • ios