ಪಂತ್ (57: 36 ಎಸತ, 3 ಬೌಂಡರಿ, 4 ಸಿಕ್ಸ್'ರ್) ಏಕಾಂಗಿ ಹೋರಾಟ ದೆಹಲಿಗೆ ಸಹಾಯಕವಾಗಲಿಲ್ಲ. ಅಂತಿಮವಾಗಿ ವಿಜಯ ಲಕ್ಷ್ಮಿ ಬೆಂಗಳೂರಿಗೆ ಒಲಿದಳು. ಆರ್'ಸಿಬಿ ಪರ  ಅಬ್ದುಲ್ಲ, ನೇಗಿ ಹಾಗೂ ಸ್ಟಾನ್'ಲೇಕಿ ತಲಾ 2 ವಿಕೇಟ್ ಪಡೆದರು.

ಬೆಂಗಳೂರು(ಏ.08): ಸಾಧಾರಣ ಮೊತ್ತ ಗಳಿಸಿದರೂ ಆರ್'ಸಿಬಿ ಡೆಲ್ಲಿ ವಿರುದ್ಧ ರೋಚಕ 15 ರನ್'ಗಳ ಜಯಗಳಿಸಿತು. ಮೊದಲ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋಲು ಕಂಡಿದ್ದ ಬೆಂಗಳೂರು ತಂಡದವರು ತವರು ನೆಲದಲ್ಲಿ ಗೆಲುವು ದಾಖಲಿಸಿದ್ದಾರೆ.

ಒಂದು ಹಂತದಲ್ಲಿ ಡೇರ್ ಡೇವಿಲ್ಸ್ ತಂಡದ ಬಿಲ್ಲಿಂಗ್ಸ್ ಹಾಗೂ ರುಶಬ್ ಪಂತ್ ಗೆಲುವನ್ನು ತಮ್ಮ ಕಡೆ ವಾಲಿಸಿಕೊಂಡಿದ್ದರು. ವಿಕೇಟ್ ಕೀಪರ್ ಪಂತ್ ಕೊನೆಯ ಹಂತದವರೆಗೂ ಔಟಾಗಿರಲಿಲ್ಲ. ಆದರೆ ಆರ್'ಸಿಬಿ ಬೌಲರ್'ಗಳ ದಾಳಿಯನ್ನು ಎದುರಿಸಲಾಗದೆ 9 ವಿಕೇಟ್'ಗಳ ನಷ್ಟಕ್ಕೆ 142 ರನ್ ಗಳಿಸಲಷ್ಟೆ ಸಾಧ್ಯವಾದರು. ಪಂತ್ (57: 36 ಎಸತ, 3 ಬೌಂಡರಿ, 4 ಸಿಕ್ಸ್'ರ್) ಏಕಾಂಗಿ ಹೋರಾಟ ದೆಹಲಿಗೆ ಸಹಾಯಕವಾಗಲಿಲ್ಲ. ಅಂತಿಮವಾಗಿ ವಿಜಯ ಲಕ್ಷ್ಮಿ ಬೆಂಗಳೂರಿಗೆ ಒಲಿದಳು. ಆರ್'ಸಿಬಿ ಪರ ಅಬ್ದುಲ್ಲ, ನೇಗಿ ಹಾಗೂ ಸ್ಟಾನ್'ಲೇಕಿ ತಲಾ 2 ವಿಕೇಟ್ ಪಡೆದರು.

ಜಾಧವ್ ಮಿಂಚು

ಇಂಡಿಯನ್ ಪ್ರೀಮಿಯರ್ ಲೀಗ್'ನ 10ನೇ ಆವೃತ್ತಿಯ 5ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ತಂಡದವರು ಡೆಲ್ಲಿ ಡೇರ್'ಡೇವಿಲ್ಸ್ ವಿರುದ್ಧ 20 ಓವರ್'ಗಳಲ್ಲಿ 8 ವಿಕೇಟ್'ಗಳ ನಷ್ಟಕ್ಕೆ 157 ರನ್'ಗಳ ಸಾಧಾರಣ ಮೊತ್ತ ಪೇರಿಸಿದ್ದರು.

ಆರಂಭಿಕ ಬ್ಯಾಟ್ಸ್'ಮೆನ್ ಸಿಕ್ಸ್'ರ್ ಸ್ಫೋಟಕ ಬ್ಯಾಟ್ಸ್'ಮೆನ್ ಕ್ರಿಸ್ ಗೇಲ್ 2ನೇ ಪಂದ್ಯದಲ್ಲಿ ವಿಫಲರಾದರೆ ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್ ಜಾಧವ್ 37 ಎಸೆತಗಳಲ್ಲಿ ಭರ್ಜರಿ 5 ಸಿಕ್ಸ್'ರ್ ಹಾಗೂ 5 ಬೌಂಡರಿಗಳೊಂದಿಗೆ 69 ರನ್ ಬಾರಿಸಿ ತಂಡವು ಸಾಧರಣ ಮೊತ್ತ ಗಳಿಸುವುದಕ್ಕೆ ಭದ್ರಬುನಾದಿಯಾದರು.

ನಾಯಕ ವ್ಯಾಟ್ಸ್'ನ್ ಸ್ಪೋಟಕ ಆಟವಾಡದೆ 4 ಬೌಂಡರಿಗಳೊಂದಿಗೆ 24 ಎಸತಗಳಲ್ಲಿ 24 ರನ್ ಗಳಿಸಿದರು.ಇನ್ನುಳಿದಂತೆ ಮನ್'ದೀಪ್ ಸಿಂಗ್ 12, ಕರ್ನಾಟಕದ ಆಟಗಾರ ಬಿನ್ನಿ 16 ಹಾಗೂ ನೇಗಿ 10 ರನ್ ಗಳಿಸಿದರು.ಡೆಲ್ಲಿ ಪರ ನಾಯಕ ಜಾಹೀರ್ ಖಾನ್ 2,ಕ್ರಿಸ್ ಮೋರಿಸ್ 3 ವಿಕೇಟ್ ಪಡೆದು ಯಶಸ್ವಿ ಬೌಲರ್'ಗಳೆನಿಸಿದರು.

ಸ್ಕೋರ್

ಆರ್'ಸಿಬಿ: 157/8 (20/20 )

ಡೆಲ್ಲಿ ಡೇರ್'ಡೇವಿಲ್ಸ್: 142/9 (20.0/20 )

ಪಂದ್ಯ ಶ್ರೇಷ್ಠ: ಕೇದಾರ್ ಜಾಧವ್