ರಿಶಭ್ ಅವರನ್ನು ಡೆಲ್ಲಿ ತಂಡ 10ನೇ ಆವೃತ್ತಿಯಲ್ಲಿ 1.90 ಕೋಟಿ ಹಣವನ್ನು ನೀಡಿ ರಿಟೈನ್ ಮಾಡಿಕೊಂಡಿತ್ತು.

ನವದೆಹಲಿ(ಮೇ.24): ಭಾರತ ತಂಡದ ದೆಹಲಿ ಮೂಲದ ಯುವ ಕ್ರಿಕೆಟಿಗ ರಿಶಭ್ ಪಂತ್, ಐಶಾರಾಮಿ ನೂತನ ಮರ್ಸಿಡೆಸ್ ಬೆಂಜ್ ಜಿಎಲ್‌ಸಿ ಕಾರನ್ನು ಖರೀದಿಸಿದ್ದಾರೆ.

ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಪ್ರಭಾವಿ ಆಟದ ಮೂಲಕ ರಿಶಭ್ ಗಮನ ಸೆಳೆದಿದ್ದರು.

ಐಪಿಎಲ್ ಪಂದ್ಯಾವಳಿಯಿಂದ ಬಂದ ಹಣದಲ್ಲಿ ಬೆಂಜ್ ಕಾರನ್ನು ರಿಶಭ್ ಖರೀದಿಸಿದ್ದಾರೆ.

ರಿಶಭ್ ಅವರನ್ನು ಡೆಲ್ಲಿ ತಂಡ 10ನೇ ಆವೃತ್ತಿಯಲ್ಲಿ 1.90 ಕೋಟಿ ಹಣವನ್ನು ನೀಡಿ ರಿಟೈನ್ ಮಾಡಿಕೊಂಡಿತ್ತು.

ರಿಶಭ್ ಮರ್ಸಿಡೆಸ್ ಬೆಂಜ್ ಜಿಎಲ್‌'ಸಿ ಕಾರನ್ನು ಖರೀಧಿಸಿದ್ದು, ಆ ಕಾರಿನ ಎಕ್ಸ್ ಶೋರೂಮಿನ ಬೆಲೆ 56 ಲಕ್ಷ ರುಪಾಯಿಗಳು. ಇದರ ಆನ್'ರೋಡ್ ಬೆಲೆ ಬರೋಬ್ಬರಿ 66 ಲಕ್ಷ ರುಪಾಯಿಗಳು.