ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಸಹಾಯಕ ಕೋಚ್ ಆಗಿರುವ ಜಾಸನ್ ಗಿಲೆಸ್ಪಿ ಜತೆಯಲ್ಲಿ ಪಾಟಿಂಗ್ ಕೂಡ ಕಾರ್ಯನಿರ್ವಹಿಸಲಿದ್ದಾರೆ.

ಸಿಡ್ನಿ(ಜ.01): ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್, ಆಸೀಸ್‌'ನ ಸಹಾಯಕ ಕೋಚ್ ಆಗಿ ನೇಮಕವಾಗಿದ್ದಾರೆ.

ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಪಾಟಿಂಗ್ ಅವರ ತರಬೇತಿ ಆಸೀಸ್ ಆಟಗಾರರಿಗೆ ಅಗತ್ಯವಾಗಿದೆ. ಹೀಗಾಗಿ ಈ ಕ್ರಮಕ್ಕೆ ಮುಂದಾಗಿದ್ದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

ಆಸೀಸ್ ತಂಡದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಆಗಿ ಪಾಟಿಂಗ್ ಮಿಂಚಿದ್ದರು. ಮೆಲ್ಬೋರ್ನ್‌ನಲ್ಲಿ ಫೆ.17, ಗೀಲಾಂಗ್‌'ನಲ್ಲಿ ಫೆ. 20 ಮತ್ತು ಅಡಿಲೇಡ್‌ನಲ್ಲಿ ಫೆ.22ರಂದು ಪಂದ್ಯಗಳು ನಡೆಯಲಿವೆ.

ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಸಹಾಯಕ ಕೋಚ್ ಆಗಿರುವ ಜಾಸನ್ ಗಿಲೆಸ್ಪಿ ಜತೆಯಲ್ಲಿ ಪಾಟಿಂಗ್ ಕೂಡ ಕಾರ್ಯನಿರ್ವಹಿಸಲಿದ್ದಾರೆ.