Asianet Suvarna News Asianet Suvarna News

ಬೆಂಗ್ಳೂರಲ್ಲಿ ನಡೆದ ರಿಪಬ್ಲಿಕ್ ಡೇ ಕರಾಟೆ ಕೂಟಕ್ಕೆ ಯಶಸ್ವಿ ತೆರೆ

ಜನವರಿ 26ರಂದು ಆರಂಭವಾದ ಕೂಟದಲ್ಲಿ ಶ್ರೀಲಂಕಾ ಹಾಗೂ ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ ಹಲವೆಡೆಯ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಮಿಸ್ ಜಪಾನ್ ಖ್ಯಾತಿಯ ನವೋಕಾ ಓಹಾರಾ ಜೊತೆಗೆ ಒಎಸ್‌ಕೆ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸುರೇಶ್ ಕೆನಿಚಿರಾ ಸೇರಿದಂತೆ 100ಕ್ಕೂ ಹೆಚ್ಚು ಅಧಿಕಾರಿಗಳು ಕೂಟದಲ್ಲಿ ಪಾಲ್ಗೊಂಡಿದ್ದರು.

Republic Day Karate host successfully in Bengaluru kvn
Author
First Published Jan 29, 2024, 10:23 AM IST

ಬೆಂಗಳೂರು(ಜ.29): ದೇಶದ ಅತಿದೊಡ್ಡ ಕರಾಟೆ ಶಾಲೆ ಒಎಸ್‌ಕೆ ಫೆಡರೇಷನ್ ಆಫ್ ಇಂಡಿಯಾ ನಗರದ ಬನಶಂಕರಿ ಬಳಿಯಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ 3 ದಿನಗಳ ಕಾಲ ಆಯೋಜಿಸಿದ್ದ ರಿಪಬ್ಲಿಕ್ ಡೇ ಅಂತಾರಾಷ್ಟ್ರೀಯ  ಕರಾಟೆ ಚಾಂಪಿಯನ್‌ಶಿಪ್ ಭಾನುವಾರ ಯಶಸ್ವಿಯಾಗಿ ತೆರೆ ಕಂಡಿದೆ.

ಜನವರಿ 26ರಂದು ಆರಂಭವಾದ ಕೂಟದಲ್ಲಿ ಶ್ರೀಲಂಕಾ ಹಾಗೂ ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ ಹಲವೆಡೆಯ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಮಿಸ್ ಜಪಾನ್ ಖ್ಯಾತಿಯ ನವೋಕಾ ಓಹಾರಾ ಜೊತೆಗೆ ಒಎಸ್‌ಕೆ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸುರೇಶ್ ಕೆನಿಚಿರಾ ಸೇರಿದಂತೆ 100ಕ್ಕೂ ಹೆಚ್ಚು ಅಧಿಕಾರಿಗಳು ಕೂಟದಲ್ಲಿ ಪಾಲ್ಗೊಂಡಿದ್ದರು.

Ranji Trophy: ಕುತೂಹಲ ಘಟ್ಟಕ್ಕೆ ಕರ್ನಾಟಕ-ತ್ರಿಪುರಾ ಪಂದ್ಯ

10ನೇ ಪ್ರೊ ಕಬಡ್ಡಿ: ಬೆಂಗ್ಳೂರು-ಜೈಪುರ ಪಂದ್ಯ 28-28 ಟೈ

ಪಾಟ್ನಾ:10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಭಾನುವಾರ ಬೆಂಗಳೂರು ಬುಲ್ಸ್‌ ಹಾಗೂ ಜೈಪುರ ಪಿಂಕ್‌ ಪ್ಯಾಂಥರ್ಸ್‌ ನಡುವಿನ ಪಂದ್ಯ ರೋಚಕ ಟೈಗೆ ಸಾಕ್ಷಿಯಾಯಿತು. ಸಮಬಲದ ಹೋರಾಟದ ಮಧ್ಯೆ ಪಂದ್ಯ ಮುಕ್ತಾಯಗೊಳ್ಳಲು 5 ನಿಮಿಷ ಬಾಕಿ ಇರುವಾಗ ಮುನ್ನಡೆ ಕಂಡ ಪ್ಯಾಂಥರ್ಸ್‌ ಗೆಲುವಿನ ದಡ ತಲುಪುವ ನಿರೀಕ್ಷೆಯಲ್ಲಿತ್ತು. ಇದಕ್ಕೆ ಅವಕಾಶ ನೀಡದ ಬುಲ್ಸ್‌ ಪಡೆ ಕೊನೆ ರೈಡ್‌ನಲ್ಲಿ ಅರ್ಜುನ್‌ ದೇಶ್ವಾಲ್‌ ಅವರನ್ನು ಟ್ಯಾಕಲ್‌ ಮಾಡುವ ಮೂಲಕ 28-28ರಿಂದ ಟೈ ಸಾಧಿಸುವಲ್ಲಿ ಯಶಸ್ವಿಯಾಯಿತು. ಭಾನುವಾರದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ತಮಿಳ್‌ ತಲೈವಾಸ್‌ 54-34 ಅಂಕಗಳಿಂದ ಜಯ ಗಳಿಸಿತು.

Breaking: ಆಸ್ಟ್ರೇಲಿಯನ್‌ ಓಪನ್ ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದ ರೋಹನ್‌ ಬೋಪಣ್ಣ!

ಇಂದಿನ ಪಂದ್ಯಗಳು: ಹರ್ಯಾಣ-ಬೆಂಗಾಲ್‌, ರಾತ್ರಿ 8ಕ್ಕೆ, ಪಾಟ್ನಾ-ಗುಜರಾತ್‌, ರಾತ್ರಿ 9ಕ್ಕೆ

ಶೂಟಿಂಗ್‌ ವಿಶ್ವಕಪ್: ಚಿನ್ನ ಪಡೆದ ರಿಧಮ್‌-ಉಜ್ವಲ್‌

ಕೈರೋ(ಈಜಿಪ್ಟ್‌): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ರಿಧಂ ಸಾಂಗ್ವಾನ್‌-ಉಜ್ವಲ್ ಮಲಿಕ್‌ ಚಿನ್ನದ ಪದಕ ಗೆದ್ದಿದ್ದಾರೆ. ಈ ಜೋಡಿ 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಅಗ್ರಸ್ಥಾನಿಯಾಯಿತು. ಇನ್ನು ಅನುರಾಧಾ ದೇವಿ 10 ಮೀ. ಏರ್‌ ಪಿಸ್ತೂಲ್‌ ಮಹಿಳಾ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದಾರೆ. ಪುರುಷರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದ ಸಾಗರ್‌ ಡಾಂಗಿ ಪದಕ ಗಳಿಸುವಲ್ಲಿ ವಿಫಲರಾದರು. ಅರ್ಜುನ್‌ ಬಬುತಾ ಮತ್ತು ಸೋನಮ್‌ ಮಸ್ಕರ್‌ ಜೋಡಿ 10 ಮೀ. ಏರ್‌ ರೈಫಲ್‌ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

Follow Us:
Download App:
  • android
  • ios