ನವದೆಹಲಿ(ಸೆ.20): ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿಗೆದಿದ್ದನ್ನು ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ. ಇದೊಂದಿಗೆ ಯುವರಾಜ್ ಸಿಂಗ್ 6 ಸಿಕ್ಸ್ ಸಿಡಿಸಿದನ್ನು ಮರೆಯುವಂತೆಯೇ ಇಲ್ಲ. ಈ ಸಂತೋಷದಲ್ಲಿ ಯುವಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.
ಯುವರಾಜ್ ಸಿಂಗ್ 6 ಸಿಕ್ಸ್ ಸಿಡಿಸಿ ನಿನ್ನೇಗೆ 9 ವರ್ಷಗಳು ಕಳೆದಿವೆ. ಈ ರೋಚಕ ಕ್ಷಣವನ್ನು ಇಂದು ಕ್ರಿಕೆಟ್ ಲೋಕ ಮತ್ತೆ ನೆನಪು ಮಾಡ್ಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯುವಿ ಸಿಕ್ಸರ್ ವಿಡಿಯೋ ಹಾಗೋ ಫೋಟೋಗಳು ಶೇರ್ ಆಗಿದ್ದು, ಮತ್ತೆ ಹಳೇ ನೆನಪನ್ನು ಮೆಲಕು ಹಾಕಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಸಂತಸದಲ್ಲಿದ್ದ ಯುವಿ ತಮ್ಮ ಮದುವೆ ಬಗ್ಗೆ ಖಾಸಗಿ ವಾಹಿನಿಯೊಂದು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಡಿಸೆಂಬರ್ನಲ್ಲಿ ಹಿಂದೂ ಹಾಗೂ ಸಿಖ್ ಸಂಪ್ರದಾಯದಂತೆ ವಿವಾಹ ಜರುಗಲಿದೆ ಎಂದು ತಿಳಿಸಿದ್ದಾರೆ.
