ಮೊದಲ ವಿಶ್ವಕಪ್ ಜಯಿಸಿಕೊಟ್ಟ ನಾಯಕನ ಜೀವನ ಚರಿತ್ರೆ ಮುಂದಿನ ವರ್ಷ ತೆರೆಗೆ

Release date of Ranveers Kapil Dev biopic revealed
Highlights

ಕಪಿಲ್ ದೇವ್ ಅವರ ಪಾತ್ರವನ್ನು ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ನಿರ್ವಹಿಸುತ್ತಿದ್ದಾರೆ.

ಮುಂಬೈ(ಫೆ.05): ಭಾರತಕ್ಕೆ ಚೊಚ್ಚಲ ವಿಶ್ವಕಪ್ ಜಯಿಸಿಕೊಟ್ಟ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಜೀವನ ಚರಿತ್ರೆ ಆಧಾರಿತ ಚಿತ್ರ ‘83’,2019ರ ಆಗಸ್ಟ್ 30ರಂದು ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ಕಬೀರ್ ಖಾನ್ ತಿಳಿಸಿದ್ದಾರೆ. ಕಪಿಲ್ ದೇವ್ ಅವರ ಪಾತ್ರವನ್ನು ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ನಿರ್ವಹಿಸುತ್ತಿದ್ದಾರೆ. 1983ರಲ್ಲಿ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿದ್ದ ಆಟಗಾರರು ಕಪಿಲ್ ಅವರ ಹಾವಭಾವ ಕುರಿತು ರಣವೀರ್‌ಗೆ ಮಾಹಿತಿ ನೀಡುತ್ತಿರುವುದು ಮತ್ತೊಂದು ವಿಶೇಷ. ರಣ್‌ವೀರ್ 83ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಜತೆ ಈ ಹಿಂದೆ ತೆಗೆಸಿಕೊಂಡಿದ್ದ ಫೋಟೋ ಸಾಮಾಜಿಕ ತಾಣದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ.

loader