ಆಸ್ಟ್ರೇಲಿಯಾ ವಿರುದ್ಧದ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದ್ದೇಕೆ ಗೊತ್ತಾ..? ಈಸಿಯಾಗಿ ಪಂದ್ಯವನ್ನ ನಮ್ಮದಾಗಿಸಿಕೊಳ್ಳೋ ಅವಕಾಶವಿದ್ದಾಗ ಪಂದ್ಯವನ್ನ ಕೈಚೆಲ್ಲಿ ಕೊಹ್ಲಿ ಹುಡುಗರು ನಿರಾಸೆ ಅನುಭವಿಸಿದ್ದು ಯಾಕೆ ಗೊತ್ತಾ..? ಟೀಂ ಇಂಡಿಯಾದ ವರ್ಸ್ಟ್ ಬ್ಯಾಟಿಂಗ್​ ಲೈನ್​ ಅಪ್​. ಹೌದು ಮೊನ್ನೆ ಬೆಂಗಳೂರಿನಲ್ಲಿ ಟೀಂ ಇಂಡಿಯಾ ಮಾಡಿದ್ದ ಎಡವಟ್ಟೇನು..? ಇಲ್ಲಿದೆ ವಿವರ

ಕೇವಲ 6 ಓವರ್​​'ಗಳಲ್ಲಿ 61 ರನ್​​ ಸಿಡಿಸೋದು ಸದ್ಯ ವಿಶ್ವದ ನಂಬರ್​​ 1 ಟೀಂ ಎನ್ನಸಿಕೊಂಡಿರೋ ಟೀಂ ಇಂಡಿಯಾಗೆ ದೊಡ್ಡ ವಿಷಯವೇ ಅಲ್ಲ. ಎಂಥಹ ಕಷ್ಟದ ಟಾರ್ಗೇಟ್​​ ಆದ್ರೂ ಸುಲಭವಾಗಿ ಗುರಿ ಮುಟ್ಟುವ ತಾಕತ್ತು ಕೊಹ್ಲಿ ಹುಡಗರಿಗೆ ಇದೆ. ಕಾರಣ ವಿಶ್ವದ ಬೆಸ್ಟ್​​ ಫಿನಿಷರ್​​​'ಗಳು ಟೀಂ ಇಂಡಿಯಾದಲ್ಲಿದ್ದಾರೆ. ಆದರೆ ಮೊನ್ನೆ ಬೆಂಗಳೂರಿನಲ್ಲಿ ಕೊನೆಯ 6 ಓವರ್'​ಗಳಲ್ಲಿ 61 ರನ್'​ಗಳಿಸಲಾಗದೆ ಮಕಾಡೆ ಮಲಗಿದೆ.

ಬೆಂಗಳೂರಿನ ಸೋಲಿನ ಹೊಣೆ ಹೊರುವವರಾರು.?

ಬೆಸ್ಟ್​​ ಫಿನಿಷರ್'​​ಗಳಿದ್ರೂ ಮೊನ್ನೆ ತಂಡ ಸೋತಿದ್ದೇಕೆ ಎಂಬ ಪ್ರಶ್ನೆ ಈಗ ನಿಮ್ಮೆಲ್ಲರಿಗೂ ಶುರುವಾಗಿರಬಹುದು. ಆದ್ರೆ ಅದಕ್ಕೆ ಕಾರಣ ಮಾತ್ರ ಟೀಂ ಇಂಡಿಯಾ ಮ್ಯಾನೇಜ್​'ಮೆಂಟ್​​​. ಕೊಹ್ಲಿ ಹುಡುಗರು ಇಂದು ತಲೆಯ ಮೇಲೆ ಕೈ ಹೊತ್ತು ಕೂರಲು ಕಾರಣ ತಂಡದ ಮ್ಯಾನೇಜ್​ಮೆಂಟ್​​​.

ನಾಯಕ ವಿರಾಟ್​​ ಕೊಹ್ಲಿ, ಕೋಚ್​​​​ ರವಿಶಾಸ್ತ್ರಿಯನ್ನೊಳಗೊಂಡ ಟೀಂ ಮ್ಯಾನೇಜ್​'ಮೆಂಟ್​​ ಮಾಡಿದ ಒಂದು ತಪ್ಪು ನಿರ್ಧಾರ ಇಂದು ಇಡೀ ದೇಶವೇ ಬೇಸರದಿಂದಿರಲು ಕಾರಣವಾಗಿದೆ. ಅಷ್ಟಕ್ಕೂ ಇವರೆಲ್ಲಾ ಮಾಡಿದ ತಪ್ಪಾದ್ರೂ ಏನ್​ ಗೊತ್ತಾ..? ತಂಡದ ಬೆಸ್ಟ್​​ ಫಿನಿಷರ್​​​ ಹಾರ್ದಿಕ್​​ ಪಾಂಡ್ಯನ ಬ್ಯಾಟಿಂಗ್​​​ ಕ್ರಮಾಂಕವನ್ನ ಬದಲಾಯಿಸಿದ್ದು.

7ನೇ ಕ್ರಮಾಂಕದಲ್ಲಿ ಪಾಂಡ್ಯ ಕಣಕಿಳಿದ್ದಿದ್ರೆ ಜಯ ನಮ್ಮದೇ

ಆಲ್​ರೌಂಡರ್​ ಹಾರ್ದಿಕ್​​ ಪಾಂಡ್ಯ ಎಂಥ ಫಿನಿಷರ್​​ ಅನ್ನೋದು ಎಲ್ಲರಿಗೂ ಗೊತ್ತಿದೆ. ಎಷ್ಟೋ ಬಾರಿ ಏಕಾಂಗಿಯಾಗಿ ತಂಡಕ್ಕೆ ಜಯತಂದಿತ್ತಿದ್ದನ್ನ ನಾವೆಲ್ಲಾ ನೋಡೇ ಇದ್ದೇವೆ. ಇಂತಹ ಅದ್ಭುತ ಬ್ಯಾಟ್ಸ್​​ಮನ್​ ಪಂದ್ಯದ ಕೊನೆಯ ಹಂತದಲ್ಲಿ ಬರಬೇಕು. ಆದ್ರೆ 3ನೇ ಪಂದ್ಯದಲ್ಲಿ ಎಕ್ಪರಿಮೆಂಟ್​​ ಎಂಬಂತೆ 4ನೇ ಕ್ರಮಾಂಕದಲ್ಲಿ ಬಡ್ತಿ ನೀಡಿದ್ರು. ಯಶಸ್ವಿ ಕೂಡ ಆದ್ರು. ಪಅಮಡ್ಯ ಅಬ್ಬರಿಸಿದ್ರು.

ಈ ಪ್ರಯೋಗ ಕೇವಲ 3ನೇ ಪಂದ್ಯದಲ್ಲಿ ಮಾತ್ರ ಆಗಿದ್ದಿದ್ರೆ 4ನೇ ಪಂದ್ಯದಲ್ಲಿ ಸೋಲು ಕಾಣುತ್ತಿರಲಿಲ್ಲ. ಆದ್ರೆ ಟೀಂ ಮ್ಯಾನೇಜ್'​ಮೆಂಟ್​​ ಪಾಂಡ್ಯರನ್ನ 4ನೇ ಕ್ರಮಾಂಕಕ್ಕೆ ಫಿಕ್ಸ್​​ ಮಾಡಿಬಿಡ್ತು. ಆದ್ರೆ 4ನೇ ಕ್ರಮಾಂಕವೇನೊ ಸ್ಟ್ರಾಂಗ್​ ಆಯ್ತು. ಆದ್ರೆ ಅವರು ಆಡುತ್ತಿದ್ದ 7ನೇ ಕ್ರಮಾಮಕಕ್ಕೆ ಭಾರಿ ಪೆಟ್ಟು ಬಿತ್ತು.

ಮೊನ್ನೆಯ ಪಂದ್ಯದಲ್ಲಿ ಜಾಧವ್​ ಔಟಾಗುತ್ತಿದಂತೆ ಒಂದು ವೇಳೆ ಪಾಂಡ್ಯ ಕ್ರೀಸ್'​ಗೆ ಬಂದಿದ್ದರೆ ಖಂಡಿತ ಟೀಂ ಇಂಡಿಯಾ ಗೆಲ್ಲುತ್ತಿತ್ತು. ಆದ್ರೆ ಕೊನೆಯಲ್ಲಿ ಧೋನಿ ಏಕಾಂಗಿ ಹೋರಟ ನಡೆಸಬೇಕಾಯ್ತು. ಸೋಲನ್ನ ಒಪ್ಪಿಕೊರ್ಳಳಬೇಕಾಯ್ತು.

ಒಟ್ಟಿನಲ್ಲಿ ಬೆಂಗಳೂರಿನ ಸೋಲಿಗೆ ಟೀಂ ಮ್ಯಾನೇಜ್'​ಮೆಂಟ್​​ನ ತಪ್ಪು ನಿರ್ಧಾರವೇ ಮುಖ್ಯಾ ಕಾರಣ. ಅತೀಯಾಗಿ ಪ್ರಯೋಗಗಳನ್ನ ಮಾಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಇದೇ ಬೆಸ್ಟ್​​ ಎಕ್ಸಾಂಪಲ್​. ಈ ತಪ್ಪಿನಿಂದ ಈಗಲಾದ್ರೂ ತಂಡವನ್ನ , ಮುನ್ನಡೆಸುವವರು ಹೆಚ್ಚೆತ್ತು ಕೊಂಡ್ರೆ ಅಷ್ಟೇ ಸಾಕು.