ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ಜಗಳಕ್ಕೆ ಹಲವರು ಹಲವು ಕಾರಣಗಳನ್ನು ಹೇಳುತ್ತಿರಬಹುದು. ಆದರೆ ಇನ್​ಸೈಡ್ ಸ್ಟೋರಿ ಮಾತ್ರ ವಿಚಿತ್ರವಾಗಿದೆ. ಕುಂಬ್ಳೆ-ಕೊಹ್ಲಿ ಕಿರಿಕ್​'ಗೆ ಅನುಷ್ಕಾ ಶರ್ಮಾ ಕಾರಣವಂತೆ. ಅನುಷ್ಕಾ ವಿಷ್ಯಕ್ಕೆ ಇವರಿಬ್ಬರು ಕಿತ್ತಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ ಹಾಗಾದರೆ ಇವರಿಬ್ಬರ ಜಗಳದಲ್ಲಿ ಅನುಷ್ಕಾ ಬಂದಿದ್ದೇಗೆ ಇಲ್ಲಿದೆ ವಿವರ.

ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ಜಗಳಕ್ಕೆ ಹಲವರು ಹಲವು ಕಾರಣಗಳನ್ನು ಹೇಳುತ್ತಿರಬಹುದು. ಆದರೆ ಇನ್​ಸೈಡ್ ಸ್ಟೋರಿ ಮಾತ್ರ ವಿಚಿತ್ರವಾಗಿದೆ. ಕುಂಬ್ಳೆ-ಕೊಹ್ಲಿ ಕಿರಿಕ್​'ಗೆ ಅನುಷ್ಕಾ ಶರ್ಮಾ ಕಾರಣವಂತೆ. ಅನುಷ್ಕಾ ವಿಷ್ಯಕ್ಕೆ ಇವರಿಬ್ಬರು ಕಿತ್ತಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ ಹಾಗಾದರೆ ಇವರಿಬ್ಬರ ಜಗಳದಲ್ಲಿ ಅನುಷ್ಕಾ ಬಂದಿದ್ದೇಗೆ ಇಲ್ಲಿದೆ ವಿವರ.

2014 - ಟೆಸ್ಟ್​​​ ಕ್ರಿಕೆಟ್​ಗೆ ಧೋನಿ ವಿದಾಯ, ಕಾರಣ ವಿರಾಟ್ ಕೊಹ್ಲಿ

ಅದು 2014ರ ಅಂತ್ಯ ಕಾಲ. ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಗ ತಂಡದ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿ, ಉಭಯ ದೇಶಗಳ ಟೆಸ್ಟ್ ಸರಣಿ ಮಧ್ಯೆಯೇ ತನ್ನ ನಾಯಕತ್ವಕ್ಕೆ ವಿದಾಯ ಹೇಳಿಬಿಟ್ಟರು. ಕಾರಣ, ವಿರಾಟ್ ಕೊಹ್ಲಿ.

2017 - ನಾಯಕತ್ವಕ್ಕೆ ಧೋನಿ ಗುಡ್​ಬೈ, ಕಾರಣ ವಿರಾಟ್ ಕೊಹ್ಲಿ

ಇದೇ ವರ್ಷ ಜನವರಿ. ಸೀಮಿತ ಓವರ್'​​ಗಳ ಭಾರತ ತಂಡದ ನಾಯಕತ್ವಕ್ಕೂ ಧೋನಿ, ಇದ್ದಕ್ಕಿದ್ದಂತೆ ವಿದಾಯ ಹೇಳಿದರು. ಇದಕ್ಕೂ ಕಾರಣ ವಿರಾಟ್ ಕೊಹ್ಲಿ.

2017 - ಕೋಚ್ ಸ್ಥಾನಕ್ಕೆ ಕುಂಬ್ಳೆ, ಕಾರಣ ವಿರಾಟ್ ಕೊಹ್ಲಿ

ಈಗ 2017ರ ಮಧ್ಯಭಾಗ. ಭಾರತ ತಂಡದ ಮುಖ್ಯ ಕೋಚ್ ಆಗಿದ್ದ, ಕರ್ನಾಟಕದ ಮಾಜಿ ಆಟಗಾರ ಅನಿಲ್ ಕುಂಬ್ಳೆ, ಇದ್ದಕ್ಕಿದ್ದಂತೆ ತಮ್ಮ ಕೋಚ್ ಹುದ್ದೆಗೆ ವಿದಾಯ ಹೇಳಿದರು. ಇದಕ್ಕೂ ಕಾರಣ ಮತ್ತೊಮ್ಮೆ ವಿರಾಟ್ ಕೊಹ್ಲಿ.

ಪದೇಪದೇ ಕೊಹ್ಲಿ ಹೆಸರು ಪ್ರಸ್ತಾಪವಾಗುತ್ತಿರುವುದು ವಿರಾಟ್ ವಿರುದ್ಧ ಅಪಪ್ರಚಾರ ಮಾಡಬೇಕೆಂದಲ್ಲ. ಇದು ಜಗತ್ತಿಗೇ ಗೊತ್ತಿರುವ ವಿಚಾರ. ಧೋನಿ ಮತ್ತು ಕೊಹ್ಲಿ ನಡುವೆ ಎಂಥದ್ದೊಂದು ಕಂದಕ ಸೃಷ್ಟಿಯಾಗಿತ್ತೆಂದು ಹೇಳಲಾಗುತ್ತಿತ್ತೋ ಪ್ರಾಯಶಃ ಅದಕ್ಕಿಂತ ದೊಡ್ಡ ಮಟ್ಟದ ಕಂದಕ ಕುಂಬ್ಳೆ-ಕೊಹ್ಲಿ ನಡುವೆಯೂ ಉಂಟಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

ಸೈದ್ಧಾಂತಿಕ ಭಿನ್ನಾಭಿಪ್ರಾಯ

ಅಷ್ಟಕ್ಕೂ ವಿರಾಟ್ ಕೊಹ್ಲಿ ಪ್ರಾಬ್ಲಂ ಏನು? ಸೈದ್ಧಾಂತಿಕ ಭಿನ್ನಾಭಿಪ್ರಾಯ. ತಂಡವನ್ನು ಒಗ್ಗೂಡಿಸುವಿಕೆಯಿಂದ ಹಿಡಿದು, ಬ್ಯಾಟಿಂಗ್ ಕ್ರಮಾಂಕದಿಂದ ಹಿಡಿದು ಎಲ್ಲದರಲ್ಲೂ ಕೊಹ್ಲಿಯದ್ದು ಹಾಗೂ ಧೋನಿಯದ್ದೂ ತದ್ವಿರುದ್ಧ ಯೋಜನೆಗಳು. ಹಾಗೆ ಕುಂಬ್ಳೆ ವಿಷ್ಯದಲ್ಲೂ ಹಾಗೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ವಿಷಯ ಅದಲ್ಲ. ಕೊಹ್ಲಿಯ ಹಸಿಬಿಸಿ ಆಲೋಚನೆಗಳಿಗೆ ಬಿಸಿಸಿಐ ಕೊಡುತ್ತಿರುವ ಬೆಲೆಯನ್ನು ಹಿರಿಯ ಅಥವಾ ಮಾಜಿ ಆಟಗಾರರಿಗೆ ನೀಡುತ್ತಿಲ್ಲ ಎಂಬುದು ಅಷ್ಟೇ ಸತ್ಯ.

ಕೊಹ್ಲಿ V/S ಕುಂಬ್ಳೆ V/S ಬಿಸಿಸಿಐ

ಕೊಹ್ಲಿ-ಕುಂಬ್ಳೆ ಕಿರಿಕ್​​'ಗೆ ಸೈದ್ದಾಂತಿಕ ಭಿನ್ನಾಭಿಪ್ರಾಯ ಒತ್ತಟ್ಟಿಗಿರಲಿ. ಬಿಸಿಸಿಐ ವಿರುದ್ಧ ಕುಂಬ್ಳೆ ಧ್ವನಿ ಎತ್ತಿದಕ್ಕೆ ಅವರಿಗೆ ಈ ಸ್ಥಿತಿ ಬಂದೋದಗಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಆಟಗಾರರ ಸಂಬಳ, ಚಾಂಪಿಯನ್ಸ್ ಟ್ರೋಫಿಗೆ ತಂಡ ಕಳುಹಿಸುವ ವಿಚಾರ. ಹೀಗೆ ಹಲವು ವಿಚಾರಗಳಲ್ಲಿ ಬಿಸಿಸಿಐ ವಿರುದ್ಧ ಧ್ವನಿ ಎತ್ತಿದಕ್ಕೆ ಕುಂಬ್ಳೆಗೆ ಈ ಸ್ಥಿತಿ ಬಂದೊದಗಿದೆ ಎನ್ನಲಾಗುತ್ತಿದೆ.

ಪತ್ನಿಯರಿಗಷ್ಟೇ ತಂಡದ ಜೊತೆ ಬರಲು ಅವಕಾಶ: ಲವರ್ಸ್ ಬರುವಂತಿಲ್ಲ ಅಂದಿದ್ದರೆ ಕುಂಬ್ಳೆ..?

ತಮಗೇನಾದರೂ ಮಾಡಿದ್ರೂ ವಿರಾಟ್​ ಸಹಿಸಿಕೊಳ್ಳುತ್ತಾರೆ. ಆದರೆ ಅನುಷ್ಕಾ ಶರ್ಮಾ ವಿಷಯಕ್ಕೆ ಬಂದರೆ ಸುಮ್ಮನಿರಲ್ಲ. ಇದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಈಗ ಕುಂಬ್ಳೆ ಮತ್ತು ಕೊಹ್ಲಿ ನಡ್ವಿನ ಕಿರಿಕ್'​ಗೆ ಅನುಷ್ಕಾ ಶರ್ಮಾ ಕಾರಣ ಎನ್ನಲಾಗುತ್ತಿದೆ.

ಟೀಂ ಇಂಡಿಯಾ ಜೊತೆ ಆಟಗಾರರ ಪತ್ನಿಯರು ಹೋಗಲು ಬಿಸಿಸಿಐ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಇನ್ನು ಮದುವೆಯೂ ಆಗದ, ನಿಶ್ಚಿತಾರ್ಥವನ್ನೂ ಮಾಡಿಕೊಳ್ಳದ, ನನ್ನ ಗರ್ಲ್​ಫ್ರೆಂಡ್ ಎಂದೂ ಹೇಳದ ಅನುಷ್ಕಾ ಶರ್ಮಾಳನ್ನ ಟೀಂ ಇಂಡಿಯಾ ಜೊತೆ ಕೊಹ್ಲಿ ಯಾವಾಗಲೂ ಕರೆದುಕೊಂಡು ಬರುತ್ತಾರೆ. ಇದಕ್ಕೆ ಕುಂಬ್ಳೆ ಬ್ರೇಕ್ ಹಾಕಿದ್ದರು. ಚಾಂಪಿಯನ್ಸ್ ಟ್ರೋಫಿ ಆಡಲು ಎಲ್ಲ ಆಟಗಾರರು ತಮ್ಮ ಪತ್ನಿಯರೊಂದಿಗೆ ಇಂಗ್ಲೆಂಡ್​ಗೆ ಹೋಗಿದ್ದರು. ವಿರಾಟ್ ಸಹ ಅನುಷ್ಕಾ ಕರೆದುಕೊಂಡು ಹೋಗಲು ರೆಡಿಯಾಗಿದ್ದರು. ಆದರೆ ಅದಕ್ಕೆ ಜಂಬೋ ಅವಕಾಶ ನೀಡಿರಲಿಲ್ಲ. ಕಾರಣ ಇದು ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಇದೇ ಇವರಿಬ್ಬರ ಕಿತ್ತಾಟಕ್ಕೆ ದೊಡ್ಡ ಕಾರಣ ಎನ್ನಲಾಗುತ್ತಿದೆ.

ಕೊಹ್ಲಿ ಹಾದಿಯನ್ನೇ ಹಿಡಿತಾರೆ ಇತರೆ ಆಟಗಾರರು: ಕುಂಬ್ಳೆ ಮಾತಿಗೆ ಗರಂ ಆದರಾ ವಿರಾಟ್​..?

ವಿರಾಟ್ ಕೊಹ್ಲಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಗರ್ಲ್​ ಫ್ರೆಂಡ್'​ಗಳನ್ನೂ ಕರೆದುಕೊಂಡು ಹೋಗಬಹುದು ಅಂತ ಅವಕಾಶ ಮಾಡಿಕೊಟ್ಟರೆ ಇತರೆ ಆಟಗಾರರು ಅವರ ಹಾದಿಯನ್ನೇ ಹಿಡಿಯುತ್ತಾರೆ. ಎಲ್ಲರೂ ತಮ್ಮ ತಮ್ಮ ಗರ್ಲ್​ ಫ್ರೆಂಡ್​'ಗಳನ್ನು ಕರೆದುಕೊಂಡು ಬರುತ್ತಾರೆ. ಆದರೆ ವಿದೇಶಗಳಲ್ಲಿ ಅವರನ್ನು ಮೇನ್'​ಟೇನ್ ಮಾಡುವವರು ಯಾರು. ಆಟದ ಕಡೆ ಗಮನ ಕೊಡದೆ ಅವರ ಜೊತೆ ಸುತ್ತಾಡುವುದರಲ್ಲೇ ಕಾಲ ಕಳೆಯುತ್ತಾರೆ. ಈ ಎಲ್ಲವನ್ನೂ ಯೋಚಿಸಿಯೇ ವಿರಾಟ್​ ಆಟಕ್ಕೆ ಕುಂಬ್ಳೆ ಬ್ರೇಕ್ ಹಾಕಿದ್ದರು. ಆದರೆ ಅದೇ ಜಂಬೋಗೆ ಮುಳುವಾಯ್ತು.