ಬೆಂಗಳೂರು(ಏ.05): ಐಪಿಎಲ್ ಟೂರ್ನಿಯಲ್ಲಿ ಸತತ 4 ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಕೆಕೆಆರ್ ವಿರುದ್ಧ ಅಬ್ಬರಿಸುತ್ತಿದೆ. ನಾಯಕ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ ಬೆನ್ನಲ್ಲೇ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 8000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಭಾರತ 2ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 17 ರನ್ ಸಿಡಿಸಿದಾಗ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 8000 ರನ್ ಪೂರೈಸಿದರು. ಇನ್ನು35 ರನ್ ಸಿಡಿಸಿದಾಗ ಭಾರತದಲ್ಲಿ 6000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ; ಎಬಿಡಿಗೆ ಕೆಕೆಆರ್ ಕಂಡ್ರೆ ಭಯ..!

ಕೊಹ್ಲಿಗೂ ಮೊದಲು ಸುರೇಶ್ ರೈನಾ 8000  ರನ್ ಪೂರೈಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ 8ಸಾವಿರ ರನ್ ಪೂರೈಸಿದ ವಿಶ್ವದ 7ನೇ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ ಅತೀ ಕಿರಿಯ ಕ್ರಿಕೆಟಿಗ ಅನ್ನೋ ದಾಖಲೆಯೂ ಕೊಹ್ಲಿ ನಿರ್ಮಿಸಿದ್ದಾರೆ.

ಇದನ್ನೂ ಓದಿ: RCB ಪಡೆಯನ್ನು ಮೂರು ಬಾರಿ ಸೋಲಿಸಿದ ಕನ್ನಡಿಗ.!

ವಿರಾಟ್ ಕೊಹ್ಲಿ 256 ಪಂದ್ಯಗಳಲ್ಲಿ 8000 ರನ್ ಪೂರೈಸಿದ್ದರೆ, ಸುರೇಶ್ ರೈನಾ 300 ಪಂದ್ಯಗಳಲ್ಲಿ 8000 ಪೂರೈಸಿದ್ದಾರೆ.  ಮೊದಲ ಸ್ಥಾನವನ್ನು ಕ್ರಿಸ್ ಗೇಲ್ ಅಲಂಕರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಗೇಲ್ 12,417 ರನ್ ಸಿಡಿಸಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂ 9922 ರನ್, ವಿಂಡೀಸ್‌ನ ಕೀರನ್ ಪೊಲಾರ್ಡ್ 9087, ಪಾಕಿಸ್ತಾನದ ಶೊಯೆಬ್ ಮಲಿಕ್ 8701 ರನ್ ಹಾಗೂ ಡೇವಿಡ್ ವಾರ್ನರ್ 8275 ರನ್ ಸಿಡಿಸಿದ್ದಾರೆ.