ದೆಹಲಿ(ಏ.28): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲಿನಿಂದ ಹೊರಬಂದು ಗೆಲುವಿನ ಸಿಹಿ ಕಾಣುತ್ತಿದೆ. ಆದರೆ ಟಾಸ್‌ ಗೆಲುವಿನಲ್ಲಿ RCB ನಾಯಕ ವಿರಾಟ್ ಕೊಹ್ಲಿ ರೆಕಾರ್ಡ್ ಮಾತ್ರ ಉತ್ತಮವಾಗಿಲ್ಲ. ಇದೀಗ ಡೆಲ್ಲಿ ವಿರುದ್ಧವೂ ಟಾಸ್ ಸೋತಿದ್ದಾರೆ. ಈ ಮೂಲಕ  RCB 12 ಪಂದ್ಯದಲ್ಲಿ 9 ಭಾರಿ ಟಾಸ್ ಸೋತಿದೆ.

 

 

ಡೆಲ್ಲಿ ವಿರುದ್ಧ ಟಾಸ್ ಸೋತ ತಕ್ಷಣ ಡ್ರೆಸ್ಸಿಂಗ್ ರೂಂ ನತ್ತ ತಿರುಗಿದ ವಿರಾಟ್ ಕೊಹ್ಲಿ, 9 ಟಾಸ್ ಸೋತಿರುವುದಾಗಿ ಸೂಚನೆ ನೀಡಿದರು. ಬಳಿಕ ಟಾಸ್ ಸೋತರೂ  ತಂಡವೇ ನಮ್ಮ ಶಕ್ತಿ ಎಂದು ಸೂಚನೆ ನೀಡಿದರು. ಇದೀಗ ಈ ವೀಡಿಯೋ ವೈರಲ್ ಆಗಿದೆ.