ಪೋರ್ಟ್ ಆಫ್ ಸ್ಪೇನ್(ಆ.26): ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಪರ ಕಳದೆ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆಲ್ರೌಂಡರ್ ಕೊಲಿನ್ ಡೆ ಗ್ರ್ಯಾಂಡ್‌ಹೊಮ್ಮೆ ಇದೀಗ ಕೆರಿಬಿಯನ್ ಪ್ರೀಮಿಯರ್  ಲೀಗ್ ಸೇರಿಕೊಂಡಿದ್ದಾರೆ.

ಆಂಡ್ರೆ ರಸೆಲ್ ನಾಯಕತ್ವದ ಜಮೈಕನ್ ತಲ್ವಾಸ್ ತಂಡದ ದೊತೆ ಗ್ರ್ಯಾಂಡ್‌ಹೊಮ್ಮೆ ಒಪ್ಪಂದ ಮಾಡಿಕೊಂಡಿದ್ದಾರೆ. ತಲ್ವಾಸ್ ತಂಡದ ಪಾಕಿಸ್ತಾನ ಕ್ರಿಕೆಟಿಗ ಇಮಾದ್ ವಾಸಿಮ್ ಏಷ್ಯಾ ಕಪ್ ಟೂರ್ನಿಗಾಗಿ ಪಾಕಿಸ್ತಾನಕ್ಕೆ ವಾಪಾಸ್ಸಾಗಿದ್ದಾರೆ. ಹೀಗಾಗಿ ಇಮಾದ್ ವಾಸಿಮ್ ಬದಲು, ಗ್ರ್ಯಾಂಡ್‌ಹೊಮ್ಮೆ ತಂಡ  ಸೇರಿಕೊಂಡಿದ್ದಾರೆ.

ಚುಟುಕು ಕ್ರಿಕೆಟ್‌ನಲ್ಲಿ ಗ್ರ್ಯಾಂಡ್‌ಹೊಮ್ಮೆ 167.43ರ ಸ್ಟ್ರೈಕ್ ರೇಟ್‌ನಲ್ಲಿ 2699 ರನ್ ಸಿಡಿಸಿದ್ದಾರೆ. ಇನ್ನು 61 ವಿಕೆಟ್ ಕೂಡ ಕಬಳಿಸಿದ್ದಾರೆ. ಈ ನ್ಯೂಜಿಲೆಂಡ್ ಕ್ರಿಕೆಟಿಗ ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅದೃಷ್ಠ ಪರೀಕ್ಷೆಗೆ ಇಳಿದ್ದಾರೆ.