ಕೊರೋನಾಗೆ ತಾಯಿ ಬಲಿ: ಅಮ್ಮನ ಸಾವಿನ ಸುದ್ದಿ ಕೇಳಿ ಮಗಳೂ ಸಾವು
ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ 45 ವರ್ಷದ ಮಹಿಳೆ| ತಾಯಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹೃದಯಾಘಾತದಿಂದ ಮಗಳು ಸಾವು| ತುಮಕೂರು ನಗರದಲ್ಲಿ ನಡೆದ ಘಟನೆ|
ತುಮಕೂರು(ಏ.30): ಕೋವಿಡ್‌ನಿಂದ ತಾಯಿ ಮೃತಪಟ್ಟಿದ್ದರಿಂದ ಆಘಾತಗೊಂಡ ಮಗಳು ಹೃದಯಾಘಾತದಿಂದ ನಿಧನವಾಗಿರುವ ಘಟನೆ ನಡೆದಿದೆ.
ತುಮಕೂರಿನ 45 ವರ್ಷದ ಮಹಿಳೆಯೊಬ್ಬರು ನಾಲ್ಕು ದಿವಸಗಳ ಹಿಂದೆ ಕೊರೋನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ತುಮಕೂರು: ಕೋವಿಡ್ ಶವಗಳ ಸಂಸ್ಕಾರ ನಡೆಸುವ ಅಸಮಾನ್ಯ ಕನ್ನಡತಿ
ತಾಯಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತೀವ್ರ ಆಘಾತಕ್ಕೆ ಒಳಗಾದ 19 ವರ್ಷದ ಮಗಳಿಗೆ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಳು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona