ಬೆಂಗಳೂರು(ಮಾ.17): ಬಹು ನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಈ ವೇಳೆಯಲ್ಲಿ ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು (ಆರ್‌ಸಿಬಿ) ತಂಡ, ಅಭಿಮಾನಿಗಳಿಗಾಗಿ ಮೊಬೈಲ್‌ ಆ್ಯಪ್‌ ಒಂದನ್ನು ಹೊರತಂದಿದೆ. 

ಇಲ್ಲಿದೆ ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ದಿನಾಂಕ !

ತಂಡದ ನಾಯಕ ವಿರಾಟ್‌ ಕೊಹ್ಲಿ, ಪ್ರಧಾನ ಕೋಚ್‌ ಗ್ಯಾರಿ ಕರ್ಸ್ಟನ್‌, ಬೌಲಿಂಗ್‌ ಕೋಚ್‌ ಆಶಿಶ್‌ ನೆಹ್ರಾ ಶನಿವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ್ಯಪ್‌ ಬಿಡುಗಡೆ ಮಾಡಿದರು.
ಆರ್‌ಸಿಬಿ ತಂಡಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಈ ಆ್ಯಪ್‌ನಲ್ಲಿ ಲಭ್ಯವಿದೆ. ಈ ಆ್ಯಪ್‌ನಲ್ಲಿ ತಾಂತ್ರಿಕ ಕ್ರೀಡೆಯ ಬಗ್ಗೆಯೂ ಸವಿಸ್ತಾರವಾದ ಮಾಹಿತಿ ನೀಡಲಾಗಿದೆ. ಈ ಆ್ಯಪ್‌ನಿಂದ ಆರ್‌ಸಿಬಿ ಪಂದ್ಯಗಳ ಟಿಕೆಟ್‌ ಕಾಯ್ದಿರಿಸಬಹುದಾಗಿದೆ. ಫಿಟ್ನೆಸ್‌ಗೆ ಸಂಬಂಧಪಟ್ಟ ಮಾಹಿತಿಗಳು ಸಹ ಸಿಗಲಿವೆ. ಅಲ್ಲದೇ ಆರ್‌ಸಿಬಿ ತಂಡದ ಆಟಗಾರರ ತರಬೇತಿ, ಅವರ ಜೀವನಶೈಲಿ, ಆಶ್ಚರ್ಯಕರ ಸಂಗತಿಗಳ ವಿವರ ದೊರೆಯಲಿದೆ.

ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

12ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 23ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ