ಧೋನಿ ನಾಯಕರಾಗಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗುತಿತ್ತು. ಸಿಎಸ್'ಕೆ ತಂಡದಲ್ಲಿದ್ದ ಅಶ್ವಿನ್, ಜಡೇಜಾ ಹಾಗೂ ಸುರೇಶ್ ರೈನಾ ಟೀಂ ಇಂಡಿಯಾದ ಖಾಯಂ ಆಟಗಾರರಾಗಿ ಗುರುತಿಸಿಕೊಂಡಿದ್ದರು.
ನವದೆಹಲಿ(ಸೆ.12): ಆಸ್ಟ್ರೇಲಿಯಾ ಸರಣಿಗೆ ಭಾರತ ತಂಡ ಪ್ರಕಟಗೊಳ್ಳುತ್ತಿದಂತೆ, ತಂಡದಲ್ಲಿ ಆರ್'ಸಿಬಿ ಪರ ಆಡುವ 4 ಆಟಗಾರರಿಗೆ ಸ್ಥಾನ ನೀಡಿರುವುದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಧೋನಿ ನಾಯಕರಾಗಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗುತಿತ್ತು. ಸಿಎಸ್'ಕೆ ತಂಡದಲ್ಲಿದ್ದ ಅಶ್ವಿನ್, ಜಡೇಜಾ ಹಾಗೂ ಸುರೇಶ್ ರೈನಾ ಟೀಂ ಇಂಡಿಯಾದ ಖಾಯಂ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಈಗ ಆರ್'ಸಿಬಿ ಆಟಗಾರರಿಗೆ ಪ್ರಾಮುಖ್ಯತೆ ದೊರೆಯುತ್ತಿದೆ ಎಂದು ಅಭಿಮಾನಿಗಳು ಟ್ವಿಟರ್'ನಲ್ಲಿ ಬರೆದುಕೊಂಡಿದ್ದಾರೆ
ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಯುಜುವೇಂದ್ರ ಚಾಹಲ್ ಹಾಗೂ ಕೇದಾರ್ ಜಾಧವ್ ಐಪಿಎಲ್'ನಲ್ಲಿ ಆರ್'ಸಿಬಿ ತಂಡದಲ್ಲಿ ಆಡುತ್ತಾರೆ.
