ಮೂರನೇ ಟೆಸ್ಟ್ ಪಂದ್ಯವು ಆಗಸ್ಟ್ 12ರಿಂದ 16ರವರೆಗೆ ಪಲ್ಲೆಕೆಲೆಯಲ್ಲಿ ನಡೆಯಲಿದೆ.

ಕೊಲಂಬೋ(ಆ.06): ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಹಿನ್ನಲೆಯಲ್ಲಿ ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಅವರು ಒಂದು ಟೆಸ್ಟ್ ಪಂದ್ಯದ ಮಟ್ಟಿಗೆ ಅಮಾನತ್ತಿಗೆ ಒಳಗಾಗಿದ್ದಾರೆ.

ಕಳೆದ 24 ತಿಂಗಳಲ್ಲಿ 2 ಬಾರಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಲಂಕಾ ವಿರುದ್ಧ 3ನೇ ಟೆಸ್ಟ್‌'ಗೆ ರವೀಂದ್ರ ಜಡೇಜಾ ಅವರನ್ನು ಐಸಿಸಿ ಅಮಾನತು ಮಾಡಿದೆ.

ಮೂರನೇ ದಿನವಾದ ಶನಿವಾರ ಕರುಣರತ್ನೆ ಕ್ರೀಸ್‌'ನಲ್ಲೇ ಇದ್ದರೂ ಜಡೇಜಾ ಅವರತ್ತ ಚೆಂಡನ್ನು ಎಸೆದಿದ್ದರು. ಜಡೇಜಾ ಚೆಂಡನ್ನು ಎಸೆದ ರೀತಿ ಅಪಾಯಕಾರಿಯಾಗಿತ್ತು ಎನ್ನುವ ಕಾರಣ, ಅವರ ವಿರುದ್ಧ ಅಂಪೈರ್‌'ಗಳು ಪಂದ್ಯದ ರೆಫ್ರಿಗೆ ದೂರು ನೀಡಿದ್ದರು.

ಜಡೇಜಾಗೆ ಒಂದು ಟೆಸ್ಟ್ ಅಮಾನತು ಮಾತ್ರವಲ್ಲದೇ ಪಂದ್ಯದ ಸಂಭಾವನೆಯ ಶೇ.50ರಷ್ಟನ್ನು ದಂಡವಾಗಿ ವಿಧಿಸಲಾಗಿದೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ವೇಳೆಯೂ ಜಡೇಜಾ ನೀತಿ ಸಂಹಿತೆ ಉಲ್ಲಂಘಿಸಿದ್ದರು.

ಮೂರನೇ ಟೆಸ್ಟ್ ಪಂದ್ಯವು ಆಗಸ್ಟ್ 12ರಿಂದ 16ರವರೆಗೆ ಪಲ್ಲೆಕೆಲೆಯಲ್ಲಿ ನಡೆಯಲಿದೆ.