ಜಾಮಾನಗರ್(ಏ.14): ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸದ್ಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಜಡೇಜಾ, ಮುಂಬರುವ ಲೋಕಸಭಾ ಚುನಾವಣೆಗಿಂತ, ವಿಶ್ವಕಪ್ ತಂಡ ಸೇರಿಕೊಳ್ಳೋ ಕುರಿತು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಆದರೆ ಜಡೇಜಾ ಕುಟುಂಬ ಸದ್ಯರು ಒಂದೊಂದು ರಾಜಕೀಯ ಪಕ್ಷ ಸೇರೋ ಮೂಲಕ ಜಡ್ಡುಗೆ ಸಂಕಷ್ಠ ತಂದೊಡ್ಡಿದ್ದಾರೆ.

ಇದನ್ನೂ ಓದಿ: ಗೆದ್ದರೂ RCB ನಾಯಕ ಕೊಹ್ಲಿಗೆ ತಪ್ಪಲಿಲ್ಲ ಸಂಕಷ್ಟ!

ರವೀಂದ್ರ ಜಡೇಜಾ ಪತ್ನಿ ರಿವಾ ಸೋಲಂಕಿ ಇತ್ತೀಚೆಗಷ್ಟೇ ಬಿಜೆಪಿ ಪಕ್ಷ ಸೇರಿಕೊಂಡಿದ್ದರು. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಡೇಜಾ ತಂದೆ ಅನಿರುದ್ ಸಿನ್ಹ ಜಡೇಜಾ ಕಾಂಗ್ರೆಸ್ ಪಕ್ಷ ಸೇರಿಕೊಂಡ ಬೆನ್ನಲ್ಲೇ, ಜಡೇಜಾ ತಂಗಿ ನೈನಬಾ ಕೂಡ ಕಾಂಗ್ರೆಸ್ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಧೋನಿ ಬೆನ್ನಿಗೆ ನಿಂತ ದಾದಾ

ಕಾಂಗ್ರೆಸ್ ಸೇರಿಕೊಂಡ ನೈನಬಾ ಕಾಂಗ್ರೆಸ್ ಪರ ಪ್ರಚಾರಕ್ಕಿಳಿಯುವುದಾಗಿ ಹೇಳಿದ್ದಾರೆ. ರೈತರಿಗಾಗಿ ಬಿಜೆಪಿ ಏನೂ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಸೇರಿಕೊಂಡಿದ್ದೇನೆ. ಕಾಂಗ್ರೆಸ್ ಮುಂದಿನ 5 ವರ್ಷದಲ್ಲಿ ರೈತರ ಎಲ್ಲಾ ಸಮಸ್ಯೆಗೆ ಸ್ಪಂದಿಸುವ ವಿಶ್ವಾಸವಿದೆ ಎಂದಿದ್ದಾರೆ.