Asianet Suvarna News Asianet Suvarna News

ಇನ್ನಿಂಗ್ಸ್ ಮುನ್ನಡೆಯತ್ತ ಭಾರತ: ಚಾಂಡಿಮಲ್, ಮ್ಯಾಥ್ಯೂಸ್ ಆಕರ್ಷಕ ಶತಕ

111(268 ಎಸೆತ) ರನ್'ಗಳ ಇವರ ಆಟದಲ್ಲಿ 14 ಬೌಂಡರಿ ಹಾಗೂ 2 ಸಿಕ್ಸ್'ರ್ ಒಳಗೊಂಡಿದ್ದವು. ಇಬ್ಬರ ಜೊತೆಯಾಟದಲ್ಲಿ 4ನೇ ವಿಕೇಟ್'ಗೆ 181 ರನ್ ಮೂಡಿ ಬಂತು. 

Ravichandran Ashwin hits back late after Angelo Mathews Dinesh Chandimal tons

ನವದೆಹಲಿ(ಡಿ.04): ಹೆಚ್ಚು ರನ್ ಗಳಿಸದಿದ್ದರೂ ಮೂರನೇ ದಿನವಿಡಿ ಶ್ರೀಲಂಕಾ ಬ್ಯಾಟ್ಸ್'ಮೆನ್'ಗಳೆ ಪಾರುಪತ್ಯ ಮೆರೆದರು. ನಾಯಕ ಚಾಂಡಿಮಾಲ್  ಹಾಗೂ ಮ್ಯಾಥ್ಯೂಸ್ ಅವರ ಆಕರ್ಷಕ ಶತಕದ ನೆರವಿನಿಂದ ದಿನದಾಂತ್ಯಕ್ಕೆ ಶ್ರೀಲಂಕಾ ತಂಡ 356/9  ಮೊತ್ತ ಗಳಿಸುವುದರೊಂದಿಗೆ  180 ರನ್ ಹಿನ್ನಡೆ ಅನುಭವಿಸಿದೆ.

131/3 ರನ್'ನೊಂದಿಗೆ 3ನೇ ದಿನದಾಟ ಆರಂಭಿಸಿದ ಚಾಂಡಿಮಾಲ್  ಹಾಗೂ ಮ್ಯಾಥ್ಯೂಸ್ ತಾಳ್ಮೆಯ ಆಟದೊಂದಿಗೆ ಭಾರತದ ಆಟಗಾರರನ್ನು ದಂಡಿಸಲು ಶುರುಮಾಡಿದರು. ಮಧ್ಯಾಹ್ನದವರೆಗೂ ಇವರಿಬ್ಬರು ಆಟಗಾರರನ್ನು ಔಟ್ ಮಾಡಲು ಸಾದ್ಯವಾಗಲೇ ಇಲ್ಲ. 98ನೇ ಓವರ್'ನಲ್ಲಿ ಅಶ್ವಿನ್ ಬೌಲಿಂಗ್'ನಲ್ಲಿ ಮ್ಯಾಥ್ಯೂಸ್  ಕೀಪರ್ ಸಾಹ ಅವರಿಗೆ ಕ್ಯಾಚ್ ನೀಡಿ ಔಟ್ ಆಗುವುದರೊಂದಿಗೆ ಇವರ ಜೊತೆಯಾಟ ಕೊನೆಗೊಂಡಿತು.

ಚಾಂಡಿಮಲ್, ಮ್ಯಾಥ್ಯೂಸ್ ಆಕರ್ಷಕ ಶತಕ

111(268 ಎಸೆತ) ರನ್'ಗಳ ಇವರ ಆಟದಲ್ಲಿ 14 ಬೌಂಡರಿ ಹಾಗೂ 2 ಸಿಕ್ಸ್'ರ್ ಒಳಗೊಂಡಿದ್ದವು. ಇಬ್ಬರ ಜೊತೆಯಾಟದಲ್ಲಿ 4ನೇ ವಿಕೇಟ್'ಗೆ 181 ರನ್ ಮೂಡಿ ಬಂತು.  ನಂತರ ಆಗಮಿಸಿದ ಮಧ್ಯಮ ಕ್ರಮಾಂಕದ ಆಟಗಾರ ಸಮರವಿಕ್ರಮ 61 ಎಸತಗಳಲ್ಲಿ 7 ಬೌಂಡರಿಗಳನ್ನು ಸಿಡಿಸಿ 33 ರನ್ ಗಳಿಸಿದರು. ತದ ನಂತರ ಬಂದ ಉಳಿದ ಆಟಗಾರರು ಹೆಚ್ಚು ಹೊತ್ತು ನಿಲ್ಲಲಿಲ್ಲ. ದಿನದಾಟದ ಅಂತ್ಯಕ್ಕೆ ಲಂಕಾ ಪಡೆ 356/9 ರನ್ ಕಲೆ ಹಾಕಿತು.

ಕೊನೆಯ ಆಟಗಾರ ಸಡಕನ್'ರೊಂದಿಗೆ ನಾಯಕ ಚಾಂಡಿಮಲ್ 147 (341 ಎಸತಗಳು 18 ಬೌಂಡರಿ ಹಾಗೂ 1 ಸಿಕ್ಸ್'ರ್') ರನ್  ಬಾರಿಸಿ ಅಜೇಯರಾಗಿ ಉಳಿದಿದ್ದರು. ಭಾರತದ ಪರ ಅಶ್ವಿನ್ 3, ಶಮಿ, ಇಶಾಂತ್ ಹಾಗೂ ಜಡೇಜ ತಲಾ 2 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. 4ನೇ ದಿನದಾಟ ಟೀಂ ಇಂಡಿಯಾದ ಗೆಲುವು ಅಥವಾ ಡ್ರಾವನ್ನು ನಿರ್ಧರಿಸಲಿದೆ.

 

ಸ್ಕೋರ್ (3ನೇ ದಿನದಾಟದ ಮುಕ್ತಾಯಕ್ಕೆ)

ಶ್ರೀಲಂಕಾ 130 ಓವರ್'ಗಳಲ್ಲಿ 356/9

(ಚಾಂಡಿಮಲ್ 147 ಅಜೇಯ, ಮ್ಯಾಥ್ಯೂಸ್ 111, ಅಶ್ವಿನ್ 90/3 )

ಭಾರತ 536/7 ಡಿಕ್ಲೇರ್ಡ್

Follow Us:
Download App:
  • android
  • ios