ಯೋ ಯೋ ಟೆಸ್ಟ್ ಪಾಸ್ ಮಾಡಿದ ಅಶ್ವಿನ್; ಆದರೆ ಯುವರಾಜ್ ಸಿಂಗ್..?

First Published 12, Oct 2017, 6:13 PM IST
Ravichandran Ashwin Clears Yo Yo Endurance Test
Highlights

ಈ ಮೊದಲ ಟೀಂ ಇಂಡಿಯಾದ ಅನುಭವಿ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ 'ಯೋ ಯೋ' ಟೆಸ್ಟ್ ಪಾಸ್ ಮಾಡಲು ವಿಫಲವಾಗಿದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಗಿತ್ತು.

ಚೆನ್ನೈ(ಅ.12): ಭಾರತ ಕ್ರಿಕೆಟ್ ತಂಡದ ಆಫ್‌'ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇತ್ತೀಚೆಗಷ್ಟೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ‘ಯೋ ಯೋ’ ಫಿಟ್ನೆಸ್ ಟೆಸ್ಟ್‌'ನಲ್ಲಿ ಪಾಸಾಗಿದ್ದಾರೆ. ಸ್ವತಃ ಅವರೇ ಟ್ವಿಟರ್‌ನಲ್ಲಿ ಈ ವಿಷಯ ತಿಳಿಸಿದ್ದಾರೆ.

ಈ ಮೂಲಕ ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಆಯ್ಕೆಗೆ ಲಭ್ಯರಿರುವುದಾಗಿ ಆಯ್ಕೆಗಾರರಿಗೆ ಸಂದೇಶ ರವಾನಿಸಿದ್ದಾರೆ.

ಇತ್ತೀಚೆಗಷ್ಟೇ ಬಿಸಿಸಿಐ ಯೋ ಯೋ ಟೆಸ್ಟನ್ನು ಕಡ್ಡಾಯಗೊಳಿಸಿತ್ತು. ಈ ಮೊದಲ ಟೀಂ ಇಂಡಿಯಾದ ಅನುಭವಿ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ 'ಯೋ ಯೋ' ಟೆಸ್ಟ್ ಪಾಸ್ ಮಾಡಲು ವಿಫಲವಾಗಿದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಗಿತ್ತು.

loader