ಸುಪ್ರೀಂ ಕೋರ್ಟ್ ನೇಮಿತ ಆಡಳಿತಾಧಿಕಾರಿಗಳ ಸಮಿತಿ ಮುಖ್ಯ ಕೋಚ್ ಅವರನ್ನು ನೇಮಿಸುವಂತೆ ತಿಳಿಸಿದ ಕಾರಣ ಮುಖ್ಯ ಕೋಚ್ ಅವರನ್ನು ನೇಮಕ ಮಾಡಲಾಗಿದೆ. ಶಾಸ್ತ್ರಿ ಅವರು ಈ ಮೊದಲು ಕೋಚ್ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಿದಾಗ ಕೊನೆಯ ದಿನಾಂಕದ ಅವಧಿ ಮುಗಿದಿದ್ದರೂ ಅರ್ಜಿ ಸಲ್ಲಿಸಿರಲಿಲ್ಲ. ದಿನಾಂಕದ ಅವಧಿಯನ್ನು ವಿಸ್ತರಿಸಿದ ನಂತರ ಅರ್ಜಿ ಸಲ್ಲಿಸಿದ್ದರು. ಶಾಸ್ತ್ರಿ ಅವರು 2015ರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಿರ್ದೇಶಕರಾಗಿದ್ದರು.
ಮುಂಬೈ(ಜು.11): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೇಮಿತ ಕ್ರಿಕೆಟ್ ಸಲಹಾ ಸಮಿತಿ ಮಾಜಿ ನಾಯಕ ರವಿ ಶಾಸ್ತ್ರಿ(55) ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ಬೌಲಿಂಗ್ ಕೋಚ್ ಆಗಿ ಜಾಹೀರ್ ಕಾನ್ ಮತ್ತು ರಾಹುಲ್ ದ್ರಾವಿಡ್ ಅವರನ್ನು ವಿದೇಶಗಳಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಿಗೆ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ದ್ರಾವಿಡ್ ಈಗಾಗಲೇ ಅಂಡರ್ 19 ಹಾಗೂ ಭಾರತ 'ಎ'ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರವಿ ಶಾಸ್ತ್ರಿ ಅವರು 2019ರಲ್ಲಿ ಇಂಗ್ಲೆಂಡ್'ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್'ವರೆಗೂ ಮುಖ್ಯ ಕೋಚ್ ಆಗಿರುತ್ತಾರೆ. ನಿನ್ನೆಯಷ್ಟೆ ಕ್ರಿಕೆಟ್ ಸಲಹಾ ಸಮಿತಿ ವಿರಾಟ್ ಕೊಹ್ಲಿ ಅನುಪಸ್ಥಿತಿ ಕಾರಣ ನಾಯಕನ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಿರುವುದಾಗಿ ತಿಳಿಸಿತ್ತು.

ಸುಪ್ರೀಂ ಕೋರ್ಟ್ ನೇಮಿತ ಆಡಳಿತಾಧಿಕಾರಿಗಳ ಸಮಿತಿ ಮುಖ್ಯ ಕೋಚ್ ಅವರನ್ನು ನೇಮಿಸುವಂತೆ ತಿಳಿಸಿದ ಕಾರಣ ಮುಖ್ಯ ಕೋಚ್ ಅವರನ್ನು ನೇಮಕ ಮಾಡಲಾಗಿದೆ. ಶಾಸ್ತ್ರಿ ಅವರು ಈ ಮೊದಲು ಕೋಚ್ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಿದಾಗ ಕೊನೆಯ ದಿನಾಂಕದ ಅವಧಿ ಮುಗಿದಿದ್ದರೂ ಅರ್ಜಿ ಸಲ್ಲಿಸಿರಲಿಲ್ಲ. ದಿನಾಂಕದ ಅವಧಿಯನ್ನು ವಿಸ್ತರಿಸಿದ ನಂತರ ಅರ್ಜಿ ಸಲ್ಲಿಸಿದ್ದರು. ಶಾಸ್ತ್ರಿ ಅವರು 2015ರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಿರ್ದೇಶಕರಾಗಿದ್ದರು.

ರವಿಶಾಸ್ತ್ರಿ ಅವರು ಕರ್ನಾಟಕದ ಮಂಗಳೂರಿನ ಮೂಲದವರಾಗಿದ್ದು ಅವರ ಪೋಷಕರು ಹಲವು ವರ್ಷಗಳ ಹಿಂದೆಯೇ ಮುಂಬೈಗೆ ವಲಸೆ ಹೋದ ಕಾರಣ ಶಾಸ್ತ್ರಿ ಅವರು ಅಲ್ಲಿಯೇ ಜನಿಸಿದ್ದರು. 1981 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಅವರು 1992ರಲ್ಲಿನಿವೃತ್ತಿ ಹೊಂದಿದ್ದರು. ಇವರು 80 ಟೆಸ್ಟ್'ಗಳಿಂದ 11 ಶತಕಗಳೊಂದಿಗೆ, 3830 ರನ್'ಗಳು,151 ವಿಕೇಟ್ ಹಾಗೂ 150 ಏಕದಿನ ಪಂದ್ಯಗಳಿಂದ 4 ಶತಕಗಳೊಂದಿಗೆ 3108 ರನ್'ಗಳು 129 ವಿಕೇಟ್ ಕಿತ್ತಿದ್ದಾರೆ.

ನಿವೃತ್ತಿ ನಂತರ ಕ್ರಿಕೆಟ್ ವೀಕ್ಷಣಕಾರರಾಗಿ ಹೆಚ್ಚು ಖ್ಯಾತಿ ಹೊಂದಿದ್ದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಕುಂಬ್ಳೆ ಕೋಚ್ ಆಗಿ ಮುಂದುವರಿಯಲು ಆಸಕ್ತಿ ವಹಿಸಿರಲಿಲ್ಲ.
ಜಾಹೀರ್ ಖಾನ್