ವಿಶ್ವದ 2ನೇ ಶ್ರೇಯಾಂಕಿತ ರಶೀದ್ ಖಾನ್, 38 ಏಕದಿನ ಪಂದ್ಯಗಳಲ್ಲಿ 87 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.

ಬುಲವಾಯೊ(ಮಾ.05): ಆಫ್ಘಾನಿಸ್ತಾನದ ಲೆಗ್'ಸ್ಪಿನ್ನರ್ ರಶೀದ್ ಖಾನ್ ಏಕದಿನ ಕ್ರಿಕೆಟ್‌'ನಲ್ಲಿ ತಂಡವನ್ನು ಮುನ್ನಡೆಸಿದ ಅತಿ ಕಿರಿಯ ನಾಯಕ ಎನ್ನುವ ವಿಶ್ವ ದಾಖಲೆ ಬರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ 19 ವರ್ಷದ ರಶೀದ್, ಆಫ್ಘಾನಿಸ್ತಾನದ ನಾಯಕರಾಗಿದ್ದರು. ಈ ಮೊದಲು ಅತಿ ಕಿರಿಯ ನಾಯಕ ಎನ್ನುವ ದಾಖಲೆ ಬಾಂಗ್ಲಾದೇಶದ ರಾಜನ್ ಸಾಲ್ಹೆ (20 ವರ್ಷ 297 ದಿನ) ಹೆಸರಿನಲ್ಲಿತ್ತು. 2004ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ದ.ಆಫ್ರಿಕಾ ವಿರುದ್ಧ ತಂಡ ಮುನ್ನಡೆಸುವ ಮೂಲಕ ರಾಜನ್ ಈ ದಾಖಲೆ ಬರೆದಿದ್ದರು.

ವಿಶ್ವದ 2ನೇ ಶ್ರೇಯಾಂಕಿತ ರಶೀದ್ ಖಾನ್, 38 ಏಕದಿನ ಪಂದ್ಯಗಳಲ್ಲಿ 87 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.