ಲಖನೌ[ಸೆ.04]: ಕರ್ನಾಟಕ ರಣಜಿ ತಂಡದ ಮಾಜಿ ನಾಯಕ ಸುನಿಲ್‌ ಜೋಶಿ, 2019-20ರ ಸಾಲಿನ ದೇಸಿ ಋುತು​ವಿ​ನಲ್ಲಿ ಉತ್ತರ ಪ್ರದೇಶದ ಕೋಚ್‌ ಆಗಿ ಕಾರ್ಯ​ನಿ​ರ್ವ​ಹಿ​ಸ​ಲಿ​ದ್ದಾರೆ. ಅವ​ರನ್ನು ಒಂದು ವರ್ಷ ಅವ​ಧಿಗೆ ಕೋಚ್‌ ಆಗಿ ನೇಮಕ ಮಾಡಿ​ಕೊಂಡಿ​ರು​ವು​ದಾಗಿ ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆ ಮಂಗ​ಳ​ವಾರ ಪ್ರಕ​ಟಿ​ಸಿದೆ. 

ವಿಶ್ವಕಪ್ 2019: ಸುನಿಲ್‌ ಜೋಶಿ ಗುತ್ತಿಗೆ ವಿಸ್ತರಿಸದ ಬಾಂಗ್ಲಾದೇಶ

ನಾವು ಸುನಿಲ್ ಜೋಶಿ ಅವರನ್ನು ಒಂದು ವರ್ಷದ ಅವಧಿಗೆ ಕೋಚ್ ಆಗಿ ನೇಮಕ ಮಾಡಿಕೊಂಡಿದ್ದೇವೆ. ವಿಜಯ್ ಹಜಾರೆ ಟ್ರೋಫಿಗೂ ಮುನ್ನವೇ ಅವರು ತಂಡ ಕೂಡಿಕೊಳ್ಳಲಿದ್ದಾರೆ ಎಂದು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಯದುವೀರ್ ಸಿಂಗ್ ತಿಳಿಸಿದ್ದಾರೆ. ಸುನಿಲ್ ಜೋಶಿ ಸೆ.20ರಂದು ಉತ್ತರಪ್ರದೇಶ ತಂಡ ಕೂಡಿ​ಕೊ​ಳ್ಳುವ ಸಾಧ್ಯತೆಯಿದೆ.

ಏಕ​ದಿನ ವಿಶ್ವ​ಕಪ್‌ ವರೆಗೂ ಬಾಂಗ್ಲಾ​ದೇ​ಶದ ಸ್ಪಿನ್‌ ಸಲಹೆಗಾರ​ರಾಗಿ ಕಾರ್ಯ​ನಿ​ರ್ವ​ಹಿ​ಸಿದ್ದ ಅವರು, ಇತ್ತೀ​ಚೆಗೆ ಭಾರತ ತಂಡದ ಬೌಲಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿ​ಸಿ​ದ್ದರು. ಆದರೆ ಬಿಸಿ​ಸಿಐ ಅವ​ರನ್ನು ಆಯ್ಕೆ ಮಾಡ​ಲಿಲ್ಲ.

ಸೆ.04ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ