ಕಳೆದ ಆವೃತ್ತಿಯ ರಣಜಿ ಫೈನಲ್ ಪಂದ್ಯಕ್ಕೂ ಇಂದೋರ್ ಮೈದಾನ ಸಾಕ್ಷಿಯಾಗಿತ್ತು. ಕಳೆದ ಬಾರಿ ಮುಂಬೈ ತಂಡವನ್ನು ಮಣಿಸಿ ಗುಜರಾತ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಮುಂಬೈ(ಡಿ.14): ಪ್ರಸಕ್ತ ಸಾಲಿನ ಐದು ದಿನಗಳ ರಣಜಿ ಪಂದ್ಯಾವಳಿಯ ಫೈನಲ್ ಪಂದ್ಯದ ಆತಿಥ್ಯವನ್ನು ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣ ವಹಿಸಲಿದೆ ಎಂದು ಬಿಸಿಸಿಐ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿ.29ರಿಂದ ಜ.2ರ ತನಕ ಫೈನಲ್ ಪಂದ್ಯ ನಡೆಯಲಿದೆ. ರಣಜಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯಗಳು ಡಿ.17ರಿಂದ ಆರಂಭಗೊಳ್ಳಲಿದ್ದು, ಕರ್ನಾಟಕ ಹಾಗೂ ವಿದರ್ಭ ನಡುವಿನ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದ್ದು, ದೆಹಲಿ ಹಾಗೂ ಬಂಗಾಳ ನಡುವಿನ ಪಂದ್ಯಕ್ಕೆ ಪುಣೆ ಆತಿಥ್ಯ ವಹಿಸಲಿದೆ.

ಕಳೆದ ಆವೃತ್ತಿಯ ರಣಜಿ ಫೈನಲ್ ಪಂದ್ಯಕ್ಕೂ ಇಂದೋರ್ ಮೈದಾನ ಸಾಕ್ಷಿಯಾಗಿತ್ತು. ಕಳೆದ ಬಾರಿ ಮುಂಬೈ ತಂಡವನ್ನು ಮಣಿಸಿ ಗುಜರಾತ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.