ಬೆಂಗಳೂರು(ಜ.15):  ಪ್ರಚಂಡ ಲಯದಲ್ಲಿರುವ ರಾಜಸ್ಥಾನ ಹಾಗೂ ಅಸ್ಥಿರ ಕರ್ನಾಟಕ 2018-19ರ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಮಂಗಳವಾರದಿಂದ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಭಾರೀ ಕುತೂಹಲ ಮೂಡಿದೆ.

ಇದನ್ನೂ ಓದಿ: ಫ್ಲಾಸ್ ಡ್ಯಾನ್ಸ್ ಕಲಿಯಲು ಮುಂದಾದ ರೋಹಿತ್ ಶರ್ಮಾ - ವೀಡಿಯೋ ವೈರಲ್!

ಗುಂಪು ಹಂತದಲ್ಲಿ 9 ಪಂದ್ಯಗಳಲ್ಲಿ 3 ಬೋನಸ್‌ ಅಂಕಗಳೊಂದಿಗೆ ಒಟ್ಟು 7 ಗೆಲುವು ಸಾಧಿಸಿದ ರಾಜಸ್ಥಾನ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮತ್ತೊಂದೆಡೆ ಆತಿಥೇಯ ಕರ್ನಾಟಕ 3 ಗೆಲುವು, 2 ಸೋಲು, 3 ಡ್ರಾಗಳೊಂದಿಗೆ ಗಳಿಸಿದ್ದು 27 ಅಂಕ ಮಾತ್ರ.

ಕೆ.ವಿ.ಸಿದ್ಧಾಥ್‌ರ್‍ ಹಾಗೂ ಡಿ.ನಿಶ್ಚಲ್‌ ಈ ಋುತುವಿನಲ್ಲಿ ಕ್ರಮವಾಗಿ 651 ಹಾಗೂ 613 ರನ್‌ ಕಲೆಹಾಕಿದ್ದು ತಂಡದ ಬ್ಯಾಟಿಂಗ್‌ ಆಧಾರಸ್ತಂಭ ಎನಿಸಿದ್ದಾರೆ. ನಾಯಕ ಮನೀಶ್‌ ಪಾಂಡೆ ಮೇಲೆ ಹೆಚ್ಚಿನ ಒತ್ತಡವಿದೆ. ರಾಜಸ್ಥಾನದ ವೇಗಿಗಳಾದ ಅನಿಕೇತ್‌ ಚೌಧರಿ ಹಾಗೂ ತನ್ವೀರ್‌ ಉಲ್‌ ಹಕ್‌ ವಿರುದ್ಧ ರನ್‌ ಗಳಿಸುವುದು ರಾಜ್ಯದ ಬ್ಯಾಟ್ಸ್‌ಮನ್‌ಗಳಿಗೆ ಅಷ್ಟುಸುಲಭವಲ್ಲ. ಇಬ್ಬರು ವೇಗಿಗಳು ಈ ಋುತುವಿನಲ್ಲಿ ತಲಾ 47 ವಿಕೆಟ್‌ ಕಿತ್ತಿದ್ದಾರೆ. ರಾಹುಲ್‌ ಚಹರ್‌ ಹಾಗೂ ನಾಥು ಸಿಂಗ್‌ ಬೌಲಿಂಗ್‌ ಬಲವೂ ರಾಜಸ್ಥಾನಕ್ಕಿದೆ.

ಇದನ್ನೂ ಓದಿ: 87 ವರ್ಷದ ಅಭಿಮಾನಿ ಆಸೆ ಈಡೇರಿಸಿದ ಧೋನಿ

ಮತ್ತೊಂದೆಡೆ ಕರ್ನಾಟಕದ ಬೌಲಿಂಗ್‌ ಹೇಳಿಕೊಳ್ಳುವಷ್ಟುಪರಿಣಾಮಕಾರಿಯಾಗಿಲ್ಲ. ತಂಡದಲ್ಲಿ ಪದೇ ಪದೇ ಬದಲಾವಣೆ ಮಾಡಲಾಗುತ್ತಿದೆ. ರೋನಿತ್‌ ಮೋರೆ, ಶ್ರೇಯಸ್‌ ಗೋಪಾಲ್‌ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಇವರಿಬ್ಬರ ಮೇಲೆ ತಂಡ ಅವಲಂಬಿತವಾಗಿದೆ. ಚಿನ್ನಸ್ವಾಮಿ ಪಿಚ್‌ ಹಾಗೂ ವಾತಾವರಣದ ಸಂಪೂರ್ಣ ಮಾಹಿತಿ ಆತಿಥೇಯ ತಂಡಕ್ಕೆ ಇರಲಿದ್ದು ತಂಡ ಸಂಯೋಜನೆಯಲ್ಲಿ ಎಡವಟ್ಟು ಆಗದಂತೆ ಎಚ್ಚರ ವಹಿಸಬೇಕಿದೆ.

ಇದನ್ನೂ ಓದಿ: ನಿವೃತ್ತಿ ಪ್ಲಾನ್ ಬಿಚ್ಚಿಟ್ಟ ಕಿಂಗ್ ಕೊಹ್ಲಿ..!

ರಾಬಿನ್‌ ಬಿಶ್‌್ತ ಹಾಗೂ ನಾಯಕ ಮಹಿಪಾಲ್‌ ಲಾಮ್ರೊರ್‌ ಲೀಗ್‌ ಹಂತದಲ್ಲಿ ಕ್ರಮವಾಗಿ 684 ಹಾಗೂ 616 ರನ್‌ ಗಳಿಸಿದ್ದಾರೆ. ಆರಂಭಿಕ ಅಮಿತ್‌ ಗೌತಮ್‌(583), ಚೇತನ್‌ ಬಿಶ್‌್ತ ಹಾಗೂ ಅಶೋಕ್‌ ಮೆನಾರಿಯಾ ಸಹ ಉತ್ತಮ ಲಯದಲ್ಲಿದ್ದು, ರಾಜ್ಯದ ಬೌಲರ್‌ಗಳಿಗೆ ಸವಾಲೆಸೆಯಲಿದ್ದಾರೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1