ಸಿಡ್ನಿ(ಜ.13): ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ ರೋಹಿತ್ ಶರ್ಮಾ ಏಕಾಂಗಿ ಹೋರಾಟ ನೀಡಿದ್ದರು. ಆದರೆ ಟೀಂ ಇಂಡಿಯಾ ಸೋಲಿನಿಂದ ರೋಹಿತ್ ಹೋರಾಟ ವ್ಯರ್ಥವಾಯಿತು.  ಹೊಸ ವರ್ಷದಲ್ಲಿ ಅತ್ಯುತ್ತಮ ಆರಂಭ ಪಡೆದಿರುವ ರೋಹಿತ್, ಸಿಡ್ನಿ ರೆಸ್ಟೋರೆಂಟ್‌ನಲ್ಲಿ ಫ್ಲಾಸ್ ಡ್ಯಾನ್ಸ್ ಕಲಿಯೋ ಪ್ರಯತ್ನ ಮಾಡಿ ಗಮನಸೆಳೆದರು.

ಇದನ್ನೂ ಓದಿ: ಬಿಗ್ ಬ್ಯಾಶ್ ಲೀಗ್‌ನಲ್ಲಿ ಅಭಿಮಾನಿಗಳ ಮಾರಾಮಾರಿ!

ಮೊದಲ ಏಕದಿನ ಪಂದ್ಯದ ಬಳಿಕ ರೋಹಿತ್ ಶರ್ಮಾ ಹಾಗೂ ಟೀಂ ಇಂಡಿಯಾ ರೆಸ್ಟೋರೆಂಟ್‌ಗೆ ತೆರಳಿದರು. ಈ ವೇಳೆ ಪುಟಾಣಿ ಬಾಲಕಿಯೊಬ್ಬಳಿಂದ ಫ್ಲಾಸ್ ಡ್ಯಾನ್ಸ್ ಅಭ್ಯಾಸ ಮಾಡಿದರು. ಹುಡುಗಿ ನಿರಾಯಾಸವಾಗಿ ಡ್ಯಾನ್ಸ್ ಮಾಡಿದರೆ ರೋಹಿತ್ ಸ್ಟೆಪ್ಸ್ ಅರ್ಥವಾಗದೇ ಅಚ್ಚರಿಗೊಂಡರು.

 

 

ಇದನ್ನೂ ಓದಿ: ಏಕದಿನ: ಪಾಂಡ್ಯ,ರಾಹುಲ್ ಸ್ಥಾನಕ್ಕೆ ಶುಭ್‌ಮಾನ್-ವಿಜಯ್‌ಗೆ ಸ್ಥಾನ!

ರೋಹಿತ್ ಶರ್ಮಾ ಫ್ಲಾಸ್ ಡ್ಯಾನ್ಸ್ ಪ್ರಾಕ್ಟೀಸ್ ವೀಡಿಯೋ ಇದೀಗ ವೈರಲ್ ಆಗಿದೆ. ಡಿಸೆಂಬರ್ 30, 2018ರಲ್ಲಿ ತಂದೆಯಾಗಿ ಬಡ್ತಿ ಪಡೆದ ರೋಹಿತ್ ಶರ್ಮಾ, ಹೊಸ ವರ್ಷವನ್ನ ಶತಕದ ಮೂಲಕ ಬರ ಮಾಡಿಕೊಂಡಿದ್ದಾರೆ.  ಜನವರಿ 15 ರಂದು ಆಡಿಲೇಡ್‌ನಲ್ಲ ನಡೆಯಲಿರುವ 2 ಏಕದಿನ ಪಂದ್ಯದಲ್ಲಿ ರೋಹಿತ್ ಅಬ್ಬರಿಸಿ ಟೀಂ ಇಂಡಿಯಾಗೆ ಗೆಲುವು ತಂದುಕೊಡಲಿ ಅನ್ನೋದೇ ಅಭಿಮಾನಿಗಳ ಆಶಯ