ಬೆಂಗಳೂರು(ನ.06): ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ನಾಯಕತ್ವ ಕಳೆದುಕೊಂಡಿದ್ದ ವಿನಯ್‌ ಕುಮಾರ್‌ರನ್ನು, ರಣಜಿ ಟ್ರೋಫಿಯ ಮೊದಲ ಪಂದ್ಯಕ್ಕೆ ರಾಜ್ಯ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. 

‘ಎ’ ಗುಂಪಿನಲ್ಲಿರುವ ಕರ್ನಾಟಕ, ನ.12ರಿಂದ ವಿದರ್ಭ ವಿರುದ್ಧ ನಾಗ್ಪುರದಲ್ಲಿ ನಡೆಯಲಿರುವ ಪಂದ್ಯದೊಂದಿಗೆ ಈ ಋುತುವಿನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಸೋಮವಾರ ಕೆಎಸ್‌ಸಿಎ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಪ್ರಕಟಿಸಿತು. 

ಭಾರತ ‘ಎ’ ತಂಡದಲ್ಲಿರುವ ಮಯಾಂಕ್‌ ಅಗರ್‌ವಾಲ್‌, ಕೆ.ಗೌತಮ್‌, ಭಾರತ ತಂಡದಲ್ಲಿರುವ ಮನೀಶ್‌ ಪಾಂಡೆ ಸೇವೆ ಅಲಭ್ಯವಾಗಲಿದೆ.

ತಂಡದ ವಿವರ: ವಿನಯ್‌ ಕುಮಾರ್‌ (ನಾಯಕ), ಕರುಣ್‌ ನಾಯರ್‌, ಆರ್‌.ಸಮರ್ಥ್, ಡಿ.ನಿಶ್ಚಲ್‌, ಪವನ್‌ ದೇಶಪಾಂಡೆ, ಸಿದ್ಧಾರ್ಥ್, ಕೆ.ವಿ, ಸ್ಟುವರ್ಟ್‌ ಬಿನ್ನಿ, ಶ್ರೇಯಸ್‌ ಗೋಪಾಲ್‌, ಅಭಿಮನ್ಯು ಮಿಥುನ್‌, ಪ್ರಸಿದ್ಧ್ ಕೃಷ್ಣ, ಜೆ. ಸುಚಿತ್‌, ರೋನಿತ್‌ ಮೋರೆ, ಶಿಶಿರ್‌ ಭವಾನೆ, ಶರತ್‌ ಬಿ.ಆರ್‌, ಶರತ್‌ ಶ್ರೀನಿವಾಸ್‌.