ರಾಜ್’ಕೋಟ್[ಡಿ.07]: ಧರ್ಮೇಂದರ್ ಸಿಂಗ್ ಜಡೇಜಾ ಮಾರಕ ಸ್ಪಿನ್ ದಾಳಿಗೆ ತತ್ತರಿಸಿದ ಕರ್ನಾಟಕ ತಂಡವು ಸೌರಾಷ್ಟ್ರ ಎದುರಿನ ರಣಜಿ ಪಂದ್ಯದಲ್ಲಿ ಕೇವಲ 217 ರನ್’ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್’ನಲ್ಲಿ 99 ರನ್’ಗಳ ಹಿನ್ನಡೆ ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಸೌರಾಷ್ಟ್ರ ಮೊದಲ ಇನ್ನಿಂಗ್ಸ್’ನಲ್ಲಿ 316 ರನ್ ಬಾರಿಸಿ ಸರ್ವಪತನ ಕಂಡಿತ್ತು. ಜೆ. ಸುಚಿತ್ 6 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 25 ರನ್’ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಡಿ. ನಿಶ್ಚಲ್[58] ಹಾಗೂ ಕರುಣ್ ನಾಯರ್[63] ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್’ಮನ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾದರು.

ಧರ್ಮೇಂದರ್ ಸಿಂಗ್ ಜಡೇಜಾ ಕರ್ನಾಟಕದ ಪ್ರಮುಖ 7 ವಿಕೆಟ್ ಕಬಳಿಸಿ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಕಮಲೇಶ್ ಮಕ್ವಾನ 2 ಹಾಗೂ ಯುವರಾಜ್ ಚುಡಸಮಾ 1 ವಿಕೆಟ್ ಕಬಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್:
ಸೌರಾಷ್ಟ್ರ: 316/10
ಜಯದೇವ್ ಶಾ: 97
ಜೆ. ಸುಚಿತ್: 111/6
ಕರ್ನಾಟಕ: 217/10
ಕರುಣ್ ನಾಯರ್: 63
ಜಡೇಜಾ: 103/7
[* ಎರಡನೇ ದಿನದಂತ್ಯಕ್ಕೆ)