2ನೇ ಕ್ವಾರ್ಟರ್‌'ಫೈನಲ್‌'ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪಂದ್ಯ ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ನವದೆಹಲಿ(ಡಿ.18): ಪ್ರಸಕ್ತ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಇಂದೋರ್'ನ ಹೋಲ್ಕರ್ ಕ್ರೀಡಾಂಗಣದಲ್ಲಿ ಜನವರಿ 10 ರಂದು ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಹೇಳಿದೆ.
ಈ ಮುನ್ನ ನಿಗದಿಯಾದಂತೆ ಫೈನಲ್ ಪಂದ್ಯ ಜ. 12ರಂದು ನಡೆಯಬೇಕಿತ್ತು. ಆದರೆ ಕ್ರಿಕೆಟ್ ಮಂಡಳಿಯ ಒತ್ತಾಯದ ಮೇರೆಗೆ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಇದೇ ವರ್ಷದ ಅಕ್ಟೋಬರ್ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿಯ 3ನೇ ಮತ್ತು ಕೊನೆಯ ಪಂದ್ಯವನ್ನು ಈ ಕ್ರೀಡಾಂಗಣದಲ್ಲಿ ನಡೆಸಲಾಗಿತ್ತು. ಜ. 1 ಮತ್ತು ಜ.3ರಂದು ಸೆಮಿಫೈನಲ್ ಪಂದ್ಯಗಳನ್ನು ಕ್ರಮವಾಗಿ ರಾಜ್ಕೋಟ್ ಹಾಗೂ ನಾಗ್ಪುರ ಮೈದಾನದಲ್ಲಿ ನಡೆಸಲಾಗುವುದು. ಇನ್ನು ಮೊದಲ ಕ್ವಾರ್ಟರ್'ಫೈನಲ್ ಪಂದ್ಯ ಹೈದರಾಬಾದ್ ಹಾಗೂ ಮುಂಬೈ ಎದುರು ನಡೆಯಲಿದೆ.
2ನೇ ಕ್ವಾರ್ಟರ್'ಫೈನಲ್'ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪಂದ್ಯ ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. 3ನೇ ಕ್ವಾರ್ಟರ್ನಲ್ಲಿ ಗುಜರಾತ್-ಒಡಿಶಾ ತಂಡಗಳು ಸೆಣಸಿದರೆ, ನಾಲ್ಕನೇ ಕ್ವಾರ್ಟರ್ನಲ್ಲಿ ಹರಿಯಾಣ ತಂಡ ಜಾರ್ಖಂಡ್'ನ್ನು ಎದುರಿಸಲಿದೆ.
ವೇಳಾಪಟ್ಟಿ
ಕ್ವಾರ್ಟರ್ ಫೈನಲ್ ಪಂದ್ಯಗಳು (ಡಿ. 23ರಿಂದ 27)
ಮುಂಬೈ-ಹೈದರಾಬಾದ್ (ರಾಯ್ಪುರ)
ಕರ್ನಾಟಕ-ತಮಿಳುನಾಡು (ವಿಶಾಖಪಟ್ಟಣ)
ಗುಜರಾತ್-ಒಡಿಶಾ (ಜೈಪುರ)
ಹರಿಯಾಣ-ಜಾರ್ಖಂಡ್(ಬರೋಡಾ)
ಸೆಮಿಫೈನಲ್ (ಜ. 1ರಿಂದ 4)
ಮೊದಲ ಪಂದ್ಯ (ರಾಜ್'ಕೋಟ್)
ಎರಡನೇ ಪಂದ್ಯ (ನಾಗ್ಪುರ)
ಫೈನಲ್ (10ರಿಂದ 14)
ಇಂದೋರ್
