Asianet Suvarna News Asianet Suvarna News

ಮಹಿಳಾ ವಿಶ್ವಹಾಕಿ ಲೀಗ್: ಮಹಿಳಾ ತಂಡಕ್ಕೆ ರಾಣಿ ಸಾರಥ್ಯ

ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ 2018ರಲ್ಲಿ ಲಂಡನ್'ನಲ್ಲಿ ಜರುಗಲಿರುವ ಮಹಿಳಾ ವಿಶ್ವಕಪ್'ಗೆ ಅರ್ಹತೆ ಗಳಿಸಲು ಇದು ಉತ್ತಮ ವೇದಿಕೆಯಾಗಲಿದೆ.

Rani Rampal to lead Indian womens team in Hockey World League Semi Final

ನವದೆಹಲಿ(ಜೂ.21): ದಕ್ಷಿಣ ಆಫ್ರಿಕಾದ ಜೋಹಾನ್ಸ್‌'ಬರ್ಗ್‌ನಲ್ಲಿ ಜುಲೈ 8ರಿಂದ ಆರಂಭಗೊಳ್ಳಲಿರುವ ಮಹಿಳಾ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಪಂದ್ಯಾವಳಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ರಾಣಿ ರಂಪಾಲ್ 18 ಮಂದಿ ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ. ಡಿಫೆಂಡರ್ ಸುಶೀಲಾ ಚಾನುಗೆ ಉಪನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ 4-0 ಅಂತರದ ಹೀನಾಯ ಸೋಲು ಕಂಡಿರುವ ವನಿತೆಯರ ತಂಡ ಈ ಬಾರಿ ಸೋಲಿನ ಕೊಂಡಿ ಕಳಚುವ ನಿರೀಕ್ಷೆಯಲ್ಲಿದೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ 2018ರಲ್ಲಿ ಲಂಡನ್'ನಲ್ಲಿ ಜರುಗಲಿರುವ ಮಹಿಳಾ ವಿಶ್ವಕಪ್'ಗೆ ಅರ್ಹತೆ ಗಳಿಸಲು ಇದು ಉತ್ತಮ ವೇದಿಕೆಯಾಗಲಿದೆ.

ಪಂದ್ಯಾವಳಿಯಲ್ಲಿ ಭಾರತ ‘ಬಿ’ ಗುಂಪಿನಲ್ಲಿದ್ದು, ಅರ್ಜೆಂಟೀನಾ, ದ.ಆಫ್ರಿಕಾ, ಚಿಲಿ ಹಾಗೂ ಅಮೆರಿಕಾ ಸವಾಲನ್ನು ಎದುರಿಸಲಿದೆ. ಜರ್ಮನಿ, ಇಂಗ್ಲೆಂಡ್, ಐರ್ಲೆಂಡ್, ಜಪಾನ್, ಪೋಲೆಂಡ್ ‘ಎ’ ಗುಂಪಿನಲ್ಲಿವೆ.

ಭಾರತ ಜು.8ರಂದು ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ತಂಡ ಹೀಗಿದೆ:

ಗೋಲ್ ಕೀಪರ್: ಸವಿತಾ, ರಜನಿ ಎಟಿಮಾರ್ಪು

ಡಿಫೆಂಡರ್ : ದೀಪಾ ಗ್ರೇಸ್ ಎಕ್ಕಾ, ಸುನಿತಾ ಲಾಕ್ರಾ, ಗುರ್ಜೀತ್ ಕೌರ್, ಸುಶೀಲಾ ಛಾನು ಫುಕ್ರಾಂಬ(ಉಪ ನಾಯಕಿ), ಮೋನಿಕಾ

ಮಿಡ್'ಫೀಲ್ಡರ್: ರೇಣುಕ ಯಾದವ್, ನಿಕ್ಕಿ ಪ್ರಧಾನ್, ನಮಿತಾ ತೊಪ್ಪೊ, ನವ್'ಜೋತ್ ಕೌರ್, ರಿತು ರಾಣಿ, ಲಿಲಿಮಾ ಮಿಂಜ್

ಫಾರ್ವರ್ಡ್ : ರೀನಾ ಖೋಖರ್, ರಾಣಿ ರಂಪಾಲ್(ನಾಯಕಿ), ವಂದನಾ ಕಠಾರಿಯಾ, ಅನುಪಾ ಬರ್ಲಾ

Follow Us:
Download App:
  • android
  • ios